HEALTH TIPS

ಹೊರ್ಮುಜ್‌ ಜಲಸಂಧಿಯಲ್ಲಿ ಸುಂಕ ಇಲ್ಲ, ಶುಲ್ಕ ವಸೂಲಿ ಮಾಡುತ್ತೇವೆ: ಇರಾನ್‌

 ಜಾಗತಿಕ ತೈಲ ವ್ಯಾಪಾರದ ಪ್ರಮುಖ ಕೊಂಡಿಯಾಗಿರುವ ಹೊರ್ಮುಜ್ ಜಲಸಂಧಿ ಶಾಶ್ವತವಾಗಿ ಟೋಲ್ ಮುಕ್ತವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಘೋಷಿಸಿದ್ದರೂ, ಕೆಲವೊಂದು ಸೇವೆಗಳಿಗೆ ಶುಲ್ಕ ವಿಧಿಸುವ ಸುಳಿವನ್ನು ಇರಾನ್ ಸೋಮವಾರ ನೀಡಿದೆ.


'ಸಾರಿಗೆ ಸುಂಕಗಳನ್ನು ವಿಧಿಸಲು ಬಯಸುತ್ತಿಲ್ಲ; ಬದಲಾಗಿ ಒದಗಿಸಲಾಗುವ ಸೇವೆಗಳಿಗೆ ಪ್ರತಿಯಾಗಿ ಶುಲ್ಕ ವಸೂಲಿ ಮಾಡಲಾಗುವುದು' ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕಾಯಿ ಸೋಮವಾರ ತಿಳಿಸಿದ್ದಾರೆ.

ಅಲ್ಲಿ ಯಾವ ರೀತಿಯ ಸೇವೆಗಳನ್ನು ಇರಾನ್ ಒದಗಿಸಲಿದೆ ಎನ್ನುವುದು ಗೊತ್ತಾಗಿಲ್ಲ. ಆದರೆ ಪರಿಸರ ಸಂಬಂಧಿತ ಶುಲ್ಕಗಳನ್ನು ವಿಧಿಸಬಹುದು ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.

ಜಲಮಾರ್ಗದಲ್ಲಿ ಸಂಚರಿಸಲು ಪಾವತಿಸುವ 'ಸುಂಕ' (ಟೋಲ್) ಮತ್ತು ಬಂದರಿನಲ್ಲಿ ತ್ಯಾಜ್ಯ ವಿಲೇವಾರಿ ಸೌಲಭ್ಯ ಒದಗಿಸುವಂತಹ ಸೇವೆಗಳಿಗಾಗಿ ವಿಧಿಸುವ 'ಶುಲ್ಕ'ಕ್ಕೆ ವ್ಯತ್ಯಾಸವಿದೆ. ಕೆಲವು ಸಂದರ್ಭಗಳಲ್ಲಿ ಶುಲ್ಕಗಳು ಕಾನೂನುಬದ್ಧವಾಗಬಹುದು, ಆದರೆ ಹೊರ್ಮುಜ್ ಜಲಸಂಧಿಯಲ್ಲಿ ಸುಂಕ ವಿಧಿಸುವುದು ಕಾನೂನು ಎಂದು ಕಡಲ ಕಾನೂನುಬಾಹಿರ ತಜ್ಞರು ಹೇಳುತ್ತಾರೆ.

ದೀರ್ಘಕಾಲದಿಂದ ಉಚಿತವಾಗಿದ್ದ ಜಲಮಾರ್ಗವನ್ನು ಬಳಸಲು ಹಣ ಪಾವತಿಸುವುದನ್ನು ಕಡ್ಡಾಯಗೊಳಿಸುವ ಕ್ರಮವನ್ನು ಕೇವಲ 'ಶುಲ್ಕ' ಎಂದು ಕರೆಯುವುದರಿಂದಲೇ ಅದು ಕಾನೂನುಬದ್ಧ ಎನಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.

'ಕರಾವಳಿ ದೇಶವೊಂದು ನೈಸರ್ಗಿಕ ಜಲಮಾರ್ಗದ ಮೂಲಕ ಹಾದುಹೋಗಲು ಹಣ ವಸೂಲಿ ಮಾಡಲು ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ, ನೀವು ಅದನ್ನು ಸುಂಕ ಎಂದು ಕರೆದರೂ, ಶುಲ್ಕ ಎಂದು ಕರೆದರೂ ಅಥವಾ ಬೇರೇನೇ ಕರೆದರೂ ಸರಿಯೇ ಅದು ಕಾನೂನುಬಾಹಿರ' ಎಂದು ನೇವಲ್ ವಾರ್ ಕಾಲೇಜಿನ ಕಡಲ ಕಾರ್ಯತಂತ್ರದ ವಿಭಾಗದ ಮುಖ್ಯಸ್ಥ ಜೇಮ್ಸ್ ಆರ್. ಹೋಮ್ಸ್ ಹೇಳಿದ್ದಾರೆ.

'ಉದಾಹರಣೆಗೆ, ಮಲಕ್ಕಾ, ತೈವಾನ್ ಜಲಸಂಧಿಯ ಮೂಲಕ ಹಾದುಹೋಗಲು ಯಾವುದೇ ಶುಲ್ಕ ಪಾವತಿ ಮಡಬೇಕಿಲ್ಲ. ಆದರೆ ಪನಾಮ ಅಥವಾ ಸೂಯೆಜ್ ಕಾಲುವೆಯಂತಹ ಕೃತಕ ಜಲಮಾರ್ಗಗಳಲ್ಲಿ, ಆ ಕಾಲುವೆಗಳನ್ನು ನಿರ್ವಹಿಸುವ ಕರಾವಳಿ ದೇಶಗಳು ಸೇವೆಗಳನ್ನು ಒದಗಿಸುತ್ತವೆ ಮತ್ತು ಆ ಸೇವೆಗಳಿಗೆ ಹಾಗೂ ಅಲ್ಲಿನ ಮೂಲಸೌಕರ್ಯಗಳಿಗಾಗಿ ಹಣದ ವಹಿವಾಟು ನಡೆಯುತ್ತದೆ ಎಂದು ಹೋಮ್ಸ್ ಹೇಳಿದ್ದಾರೆ.

'ಹೊರ್ಮುಜ್ ಒಂದು ನೈಸರ್ಗಿಕ ಜಲಮಾರ್ಗವಾಗಿದೆ. ನನಗೆ ತಿಳಿದ ಮಟ್ಟಿಗೆ ಇರಾನ್ ಶುಲ್ಕ ವಿಧಿಸಲು ಮುಂದಾಗುತ್ತಿರುವ ಏಕೈಕ ಸೇವೆ ಎಂದರೆ ಹಡಗುಗಳ ಮೇಲೆ ದಾಳಿ ಮಾಡದಿರುವುದು ಮಾತ್ರ' ಎಂದು ಅವರು ಹೇಳಿದ್ದಾರೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries