ಪೆರ್ಲ: ಬಜಕೂಡ್ಲು ಅಮೃತಧಾರಾ ಗೋ ಶಾಲೆಯಲ್ಲಿ ಇತ್ತೀಚೆಗೆ ಜರುಗಿದ 'ಶನಿ ನಮನ ತಾಪ ಶಮನ' ಕಾರ್ಯಕ್ರಮದ ಯಶಸ್ವಿಯಾಗಿ ದುಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ನಿಟ್ಟಿನಲ್ಲಿ ಜೂ.14ರಂದು ಸಂಜೆ 3ಕ್ಕೆ ಗೋಶಾಲೆಯ 'ಧರ್ಮಮಂದಿರ'ದಲ್ಲಿ ಸಭೆ ಜರುಗಲಿದೆ. ಈ ಸಂದರ್ಭ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಗೋ ಶಾಲೆಯ ಪ್ರಮುಖರು, ಗಣ್ಯರು ಕಾರ್ಯಕರ್ತರನ್ನು ಗೌರವಿಸಲಿರುವುದಾಗಿ ಪ್ರಕಟಣೆ ತಿಳಿಸಿದೆ.

