HEALTH TIPS

'ಟೆಲಿಗ್ರಾಂ' ನಿರ್ಬಂಧದ ಹಿಂದೆ ರಿಲಯನ್ಸ್ ಪಾತ್ರ: ಕಂಪನಿ ಸಿಇಒ ಡ್ಯುರೊವ್ ಆರೋಪ

 ನವದೆಹಲಿ: ಭಾರತದಲ್ಲಿ ಟೆಲಿಗ್ರಾಂ ಆಯಪ್‌ ನಿರ್ಬಂಧದ ಹಿಂದೆ ರಿಲಯನ್ಸ್ ಪಾತ್ರ ಇರಬಹುದು ಎಂದು ಟೆಲಿಗ್ರಾಂ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಪಾವೆಲ್ ಡ್ಯುರೊವ್ ಆರೋಪಿಸಿದ್ದಾರೆ.


ಅಲ್ಲದೆ, ರಿಲಯನ್ಸ್‌ನ ಜೊತೆ ಸಂಬಂಧ ಹೊಂದಿರುವ ಸಂಸ್ಥೆಯೊಂದು ವಿದೇಶಗಳಲ್ಲಿಯೂ ಟೆಲಿಗ್ರಾಂನ ಇಂಟರ್ನೆಟ್‌ ಸಂಪರ್ಕಕ್ಕೆ ಅಡ್ಡಿ ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಆದರೆ ಅವರ ಆರೋಪವನ್ನು ಉದ್ಯಮದ ಮೂಲಗಳು ಅಲ್ಲಗಳೆದಿವೆ.

ಭಾರತದ ದೂರಸಂಪರ್ಕ ವಲಯದ ರಿಲಯನ್ಸ್‌ ಕಂಪನಿಯು ದೇಶದ ಆಚೆಗಿನ ಲಕ್ಷಾಂತರ ಮಂದಿ ಬಳಕೆದಾರರಿಗೂ ಟೆಲಿಗ್ರಾಂ ಆಯಪ್‌ ಸಿಗದಂತೆ ಮಾಡುತ್ತಿದೆ ಎಂದು ಡ್ಯುರೊವ್ ಅವರು ಎಕ್ಸ್‌ ಮೂಲಕ ದೂರಿದ್ದಾರೆ.

'ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಗುತ್ತಿದೆ ಎಂದು ಅನ್ನಿಸುತ್ತಿದೆ... ವಾಟ್ಸ್‌ಆಯಪ್‌ನ ಹಿಂದಿರುವ ಮೆಟಾ ಕಂಪನಿಯು ರಿಲಯನ್ಸ್‌ನ ಭಾಗಶಃ ಮಾಲೀಕತ್ವ ಹೊಂದಿರುವ ಕಾರಣದಿಂದಾಗಿ ಇದು ಸ್ಪರ್ಧಾಸಮರದ ಒಂದು ಭಾಗವಾಗಿರಬಹುದು' ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಟೆಲಿಗ್ರಾಂ ಆಯಪ್‌ ನಿಷೇಧದ ಲಾಬಿ ಪ್ರಯತ್ನಗಳ ಹಿಂದೆ ರಿಲಯನ್ಸ್‌/ವಾಟ್ಸ್‌ಆಯಪ್‌ ಪಾತ್ರವಿದ್ದರೆ ಆಶ್ಚರ್ಯವೇನೂ ಇಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ಡ್ಯುರೊವ್ ಅವರು ರಿಲಯನ್ಸ್ ಕಮ್ಯುನಿಕೇಷನ್ಸ್‌ ಹಾಗೂ ರಿಲಯನ್ಸ್‌ ಇಂಡಸ್ಟ್ರೀಸ್‌ನ ದೂರಸಂಪರ್ಕ ಕಂಪನಿ ಜಿಯೊ ಹೆಸರನ್ನು ಒಟ್ಟಾಗಿ ನೋಡುತ್ತಿರುವಂತಿದೆ ಎಂದು ದೂರಸಂಪರ್ಕ ಉದ್ಯಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

'ಜಿಯೊದಲ್ಲಿ ಮೆಟಾ ಕಂಪನಿಯು ಸಣ್ಣ ಪ್ರಮಾಣದ ಷೇರು‍ಪಾಲು ಹೊಂದಿದೆ. ನಿತ್ಯದ ಕಾರ್ಯಾಚರಣೆಗಳಲ್ಲಿ ಅಥವಾ ಕಂಪನಿಯ ನಿರ್ವಹಣೆಯಲ್ಲಿ ಮೆಟಾ ಪಾತ್ರ ಇಲ್ಲ. ಎರಡು ಪ್ರತ್ಯೇಕ ಕಂಪನಿಗಳನ್ನು ಒಂದೇ ಕಡೆ ತಂದು ಡ್ಯುರೊವ್ ಅವರು ವಲಯದ ಬಗ್ಗೆ ತಮಗೆ ಪೂರ್ಣ ಅರಿವಿಲ್ಲದಿರುವುದನ್ನು ತೋರಿಸಿದ್ದಾರೆ ಅಥವಾ ತಪ್ಪುಮಾಹಿತಿ ಹರಡಲು ಉದ್ದೇಶಪೂರ್ವಕ ಪ‍್ರಯತ್ನ ನಡೆಸಿದ್ದಾರೆ' ಎಂದು ಮೂಲಗಳು ಹೇಳಿವೆ.

ಟೆಲಿಗ್ರಾಂ, ರಿಲಯನ್ಸ್ ಕಮ್ಯುನಿಕೇಷನ್ಸ್, ಜಿಯೊ, ಮೆಟಾ ಮತ್ತು ವಾಟ್ಸ್‌ಆಯಪ್‌ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries