ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಕಾಸರಗೋಡು ಬದಿಯಡ್ಕ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದಿ ಕ್ರಿಟಿಕಲ್ ಇಲ್ನೆಸ್ ಫಂಡ್ ಅನುದಾನದಡಿಯಲ್ಲಿ ಕನ್ನೆಪ್ಪಾಡಿ ಕಾರ್ಯಕ್ಷೇತ್ರದ ಶ್ರೀ ವಿದ್ಯಾಲಕ್ಷ್ಮಿ ತಂಡದ ಸದಸ್ಯೆ ಮೀನಾಕ್ಷಿ ಕ್ಯಾನ್ಸರ್ ಕಾಯಿಲೆಯಿಂದ ಚಿಕಿತ್ಸೆ ಪಡೆದಿದ್ದು ಈ ಸಂಬಂಧ ಕ್ಷೇತ್ರದಿಂದ ಮೊತ್ತ ರೂ 30000 ವನ್ನು ಮಂಜೂರು ಮಾಡಿದ್ದು ಇದರ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ದಿನೇಶ್ ಬಿ. ಹಸ್ತಾಂತರಿಸಿದರು. ಬದಿಯಡ್ಕ ವಲಯ ಮೇಲ್ವಿಚಾರಕಿ ಸುಗುಣ ಓ ಹವಲ್ದಾರ್, ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

.jpg)
