ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ 3ನೇ ವಾರ್ಡು ದೇವರಮೆಟ್ಟು ಅಂಗನವಾಡಿಯಲ್ಲಿ ಜರಗಿದ 2026-27ನೇ ಸಾಲಿನ ಪ್ರವೇಶೋತ್ಸವವನ್ನು ಸದಸ್ಯ ಶ್ಯಾಮಪ್ರಸಾದ ಸರಳಿ ಉದ್ಘಾಟಿಸಿದರು. ಅಂಗನವಾಡಿ ವಿಕಸನ ಸಮಿತಿಯ ಸದಸ್ಯ ಜೋನ್ ಡಿಸೋಜ ಮಾಡತ್ತಡ್ಕ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಮಕ್ಕಳಿಗೆ ವೈಯಕ್ತಿಕ ನೆಲೆಯಲ್ಲಿ ಪೆನ್ಸಿಲ್, ಪುಸ್ತಕ, ರಬ್ಬರು ವಿತರಿಸಿದರು. ವಸಂತ ಸ್ವಾಮಿಕೃಪಾ ಹಾರೈಸಿ ಮಕ್ಕಳಿಗೆ ಪೆನ್ಸಿಲ್, ಪುಸ್ತಕ, ರಬ್ಬರು ಕೊಡುಗೆಯಾಗಿ ನೀಡಿದರು. ಆಶಾ ಕಾರ್ಯಕರ್ತೆ ದೇವಕಿ ಅಣಬೈಲು, ಅಜೀಜ್ ಪಾಡಲಡ್ಕ, ಪಾಲಕರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಲೀಲ ದೇವರಮೆಟ್ಟು ಸ್ವಾಗತಿಸಿ, ಸಹಾಯಕಿ ಸರೋಜಿನಿ ವಂದಿಸಿದರು.

.jpg)
