ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಗೆ ಮತ್ತೊಂದು ಜೀವ ಬಲಿಯಾಗಿದೆ. ಮಧೂರು ಸನಿಹದ ಮಂಜತ್ತಡ್ಕದಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ತೋಡಿದ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟಿದ್ದಾನೆ.
ಮಂಜತ್ತಡ್ಕ ನಿವಾಸಿ ಅಹಮ್ಮದ್ ಸಾಜಿದ್ ಎಂಬವರ ಪುತ್ರ ಮುಹಮ್ಮದ್ ಅಯಾನ್ ಸಾಸಿಂ (6) ಮೃತಪಟ್ಟ ಬಾಲಕ. ಅಯಾನ್ ನಾಸಿಂ ನಾಪತ್ತೆಯಾಗಿದ್ದು, ಹುಡುಕಾಡುವ ಮಧ್ಯೆ ಮನೆಯಿಂದ ನೂರು ಮೀ. ದೂರದಲ್ಲಿ ನಿರ್ಮಾಣ ಹಂತದ ಮನೆಯ ಸಮೀಪ ಬಾಲಕನ ಚಪ್ಪಲಿ ಪತ್ತೆಯಾಗಿತ್ತು. ಹುಡುಕಾಟ ಮುಂದುವರಿಸಿದಾಗ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಲು ತೋಡಿದ ಹೊಂಡದಲ್ಲಿ ನಾಸಿಂ ಪತ್ತೆಯಾಗಿದ್ದು, ತಕ್ಷಣ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಘಟನೆಗೆ ಸಂಬಂಧಿಸಿ ಕಾಸರಗೋಡು ನಗರಠಾಣೆ ಪೆÇಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಡೂರು ಪೆಲಮರ್ವದಲ್ಲಿ ಆವರಣಗೋಡೆ ಕುಸಿದು ಇಬ್ಬರು ಬಾಲಕರು ಮೃತಪಟ್ಟ ಘಟನೆ ಹಸಿರಾಗಿರುವ ಮಧ್ಯೆ ಮಧೂರು ಮಂಜತ್ತಡ್ಕದಲ್ಲಿ ಬಾಲಕ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾನೆ.

.jpg)
