HEALTH TIPS

ಇಂಧನ ಬೆಲೆಯೇರಿಕೆ ಜತೆಗೆ ಸರ್ಕಾರದ ಉಚಿತ ಪ್ರಯಾಣ ಯೋಜನೆ-ಖಾಸಗಿ ಬಸ್ ವಲಯದ ಸಂರಕ್ಷಣೆಗೆ ಬಸ್ ಮಾಲಿಕರ ಒತ್ತಾಯ

ಕಾಸರಗೋಡು: ಜಿಲ್ಲಾ ಖಾಸಗಿ ಬಸ್ ಓಪರೇಟರ್ಸ್  ಫೆಡರೇಶನ್ ವತಿಯಿಂದ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಬಳಿ ಬಸ್ ಮಾಲಿಕರು ಧರಣಿ ನಡೆಸಿದರು.  ಇಂಧನ ಬೆಲೆಯೇರಿಕೆ  ಹಿಂಪಡೆಯುವಂತೆ ಒತ್ತಾಯಿಸಿ ಧರಣಿ ಆಯೋಜಿಸಲಾಗಿತ್ತು.  ಸಂಘಟನೆ  ಜಿಲ್ಲಾಧ್ಯಕ್ಷ ಕೆ. ಗಿರೀಶ್ ಧರಣಿ ಉದ್ಘಾಟಿಸಿದರು. ಉಪಾಧ್ಯಕ್ಷ ಪಿ. ಎ. ಮುಹಮ್ಮದ್‍ಕುಞÂ ಅಧ್ಯಕ್ಷತೆ ವಹಿಸಿದ್ದರು. 


ಮಹಿಳೆಯರಿಗೆ ಕೆಎಸ್‍ಆರ್‍ಟಿಸಿಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಟ್ಟಲ್ಲಿ,  ಖಾಸಗಿ ಬಸ್‍ಗಳನ್ನು ಅರ್ಧಕ್ಕಿಂತ ಹೆಚ್ಚು ಆಶ್ರಯಿಸುವ ಮಹಿಳಾ ಪ್ರಯಾಣಿಕರು  ಸಹಜವಾಗಿ ಕೆಎಸ್ಸಾರ್ಟಿಸಿಯನ್ನು ಶ್ರಯಿಸಲಿದ್ದಾರೆ. ಇದರಿಂದ ಖಾಸಗಿ ಬಸ್‍ಗಳು ಇಂಧನ ತುಂಬಲು ಹಾಗೂ ಸಿಬ್ಬಂದಿ ವೇತನ ನೀಡಲೂ ಆದಾಯ ಲಭಿಸದ ಸ್ಥಿತಿ ನಿರ್ಮಾಣವಾಗುವುದಲ್ಲದೆ,  ಖಾಸಗಿ ಬಸ್‍ಗಳ ಅಸ್ತಿತ್ವವೇ ಬುಡಮೇಲಾಗಲಿದೆ.  ಖಾಸಗಿ ಬಸ್ ಉದ್ಯಮದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಸಿದ್ಧರಾಗಿರಬೇಕು. ಕೆಎಸ್‍ಆರ್‍ಟಿಸಿ ಮತ್ತು ಖಾಸಗಿ ಬಸ್ ವಲಯ ಎರಡನ್ನೂ ಸಂರಕ್ಷಿಸುವ ಸಾರಿಗೆ ನೀತಿಯನ್ನು ರಚಿಸುವಂತೆ ಕಾಸರಗೋಡು ಜಿಲ್ಲಾ ಬಸ್ ನಿರ್ವಾಹಕರ ಒಕ್ಕೂಟವು ಸರ್ಕಾರವನ್ನು ಒತ್ತಾಯಿಸಿದೆ.

ಕೇಂದ್ರ ಸಮಿತಿ ಸದಸ್ಯ ಸಿ.ಎ. ಮುಹಮ್ಮದ್‍ಕುಞÂ, ರಾಜ್ಯ ಸಮಿತಿ ಸದಸ್ಯ ಎ.ವಿ. ಪ್ರದೀಪ್, ಜಿಲ್ಲಾ ಉಪಾಧ್ಯಕ್ಷ ಪಿ.ವಿ. ಪದ್ಮನಾಭನ್, ಸುಬ್ಬಣ್ಣ ಆಳ್ವ, ರಾಜೇಶ್ ಯು, ಕೆ.ಎನ್. ಬಾಲಕೃಷ್ಣನ್ ಉಪಸ್ಥಿತರಿದ್ದರು.  ಜಿಲ್ಲಾ ಕಾರ್ಯದರ್ಶಿ ಟಿ. ಲಕ್ಷ್ಮಣನ್ ಸ್ವಾಗತಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries