ಕಾಸರಗೋಡು: ರಾಜ್ಯದಾದ್ಯಂತ ನಡೆಯುತ್ತಿರುವ ಮಾದಕ ದ್ರವ್ಯ ವಿರೋಧಿ ಅಭಿಯಾನ 'ಆಪರೇಷನ್ ತೂಫಾನ್' ಅಂಗವಾಗಿ, ಕಾಸರಗೋಡಿನಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ 45 ಗ್ರಾಂ ಮಾರಕ ಮಾದಕ ದ್ರವ್ಯ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಒಬ್ಬ ಆರೋಪಿಯನ್ನುಬಂಧಿಸಲಾಗಿದೆ.
ಕಾಸರಗೋಡು ಕಸಬಾ ಎಸ್.ಡಿ. ರಸ್ತೆಯ ಪಳ್ಳಂ 'ಬೈತುಲ್ ನೂರ್' ನಿವಾಸಿ ಅಬ್ದುಲ್ ನಾಸಿರ್ (40)ಬಂಧಿತ. ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ವಿಜಯ್ ಭರತ್ ರೆಡ್ಡಿ ನಿರ್ದೇಶ ಪ್ರಕಾರ ಕಾರ್ಯಾಚರಣೆ ನಡೆಸಲಾಗಿದೆ. ಭಾರೀಪ್ರಮಾಣದಲ್ಲಿ ಎಂಡಿಎಂಎ ಪತ್ತಯಾಗಿರುವ ಹಿನ್ನೆಲೆಯಲ್ಲಿ 'ವಾಣಿಜ್ಯ'ಎಂದು ವರ್ಗೀಕರಿಸಲಾಗಿದೆ.
ಮಾದಕದ್ರವ್ಯ ಮಾಫಿಯಾ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿರುವ 'ಆಪರೇಷನ್ ತೂಫಾನ್' ಯೋಜನೆಯ ಮೂಲಕ ಪೆÇಲೀಸರು ಜಿಲ್ಲೆಯಲ್ಲಿ ಇದುವರೆಗೆ 51 ಪ್ರಕರಣ ದಾಖಲಿಸಿಕೊಂಡಿದ್ದು, 55 ಜನರನ್ನು ಬಂಧಿಸಿದ್ದಾರೆ. ಮುಂದಿನ ದಿನಗಳಲ್ಲಿ ತಪಾಸಣೆ ಚುರುಕುಗೊಳಿಸಲಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.


