HEALTH TIPS

ಚಿಲ್ಲರೆ ಡೀಸೆಲ್ ಮಾರಾಟ ನಿಯಂತ್ರಣ ಹಿಂತೆಗೆಯಬೇಕು-ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ

ಕಾಸರಗೋಡು: ಕೈಗಾರಿಕಾ ಸಂಸ್ಥೆಗಳಿಗೆ ಚಿಲ್ಲರೆ ಮಾರಾಟ ಮಾಡುವ ಪೆಟ್ರೋಲ್ ಬಂಕ್‍ಗಳಿಂದ ನೇರವಾಗಿ ಡೀಸೆಲ್, ಪೆಟ್ರೋಲ್ 2026 ಜೂನ್ 11ರಿಂದ ಖರೀದಿಸಬಾರದು ಎಂಬ ಆದೇಶದಿಂದಾಗಿ ವ್ಯಾಪಾರಿ, ಕೈಗಾರಿಕೆಗಳು ಸಂದಿಗ್ಧತೆಯಲ್ಲಿದೆಯೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಆರೋಪಿಸಿದೆ. 

ವಿದ್ಯುತ್ ಮೊಟಕು ಎದುರಿಸುವಾಗ ಸಂಸ್ಥೆಗಳಲ್ಲಿ ಜನರೇಟರ್‍ಗಳನ್ನು ಕಾರ್ಯಾಚರಿಸುವಂತೆ ಮಾಡಬೇಕಾಗುತ್ತದೆ. ಮೇಲಿನ ಆದೇಶದಿಂದ ಪೆಟ್ರೋಲ್ ಬಂಕ್‍ನಿಂದ ಪೆಟ್ರೋಲ್ ಅಥವಾ ಡೀಸೆಲ್ ಲಭಿಸುವುದಿಲ್ಲ. ಆಸ್ಪತ್ರೆ ಸಹಿತದ ವ್ಯಾಪಾರ, ವಾಣಿಜ್ಯ ಸಂಸ್ಥೆಗಳು ಈ ಆದೇಶದಿಂದ ಬಹಳ ಸಂಕಷ್ಟದಲ್ಲಿವೆ. ವಿದ್ಯುತ್ ಮೊಟಕಾದಾಗ ಹೋಟೆಲ್‍ಗಳು, ಐಸ್‍ಕ್ರೀಂ, ಮೀನು, ಮಾಂಸ ವ್ಯಾಪಾರಿಗಳನ್ನು ನೇರವಾಗಿ, ಜನರೇಟರ್‍ನಲ್ಲಿ ಕಾರ್ಯಾಚರಿಸುವ ಆಸ್ಪತ್ರೆಗಳು, ಜ್ಯುವೆಲ್ಲರಿ, ಸಹಿತದ ಸಂಸ್ಥೆಗಳ ಚಟುವಟಿಕೆಗಳಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಈ ರೀತಿಯ ಸಂದಿಗ್ಧತೆಗಳಲ್ಲಿ ಇಂಧನ ಲಭ್ಯಗೊಳಿಸಬೇಕೆಂದು ಆಗ್ರಹಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಅಧ್ಯಕ್ಷ ಕೆ. ಅಹಮ್ಮದ್ ಶರೀಫ್, ಜಿಲ್ಲಾ ಉಪಾಧ್ಯಕ್ಷ ಎ.ಎ. ಅಸೀಸ್, ಜಿಲ್ಲಾ ಕಾರ್ಯದರ್ಶಿ ಕೆ. ದಿನೇಶ್, ಆಲ್ ಕೇರಳ ಗೋಲ್ಡ್ ಆಂಡ್ ಸಿಲ್ವರ್ ಅಸೋಸಿಯೇಶನ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ಕಬೀರ್ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries