ಬದಿಯಡ್ಕ: 1919 ರಲ್ಲಿ ನೀರ್ಚಾಲಿನಲ್ಲಿ ಸ್ಥಾಪಿತವಾದ ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನ ಶಾಖೆಯು ಬದಿಯಡ್ಕ ಗಣೇಶ ಮಂದಿರದ ಮುಂಭಾಗದಲ್ಲಿ ಕಳೆದ ಅನೇಕ ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಪ್ರಸ್ತುತ ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡುವ ಸಲುವಾಗಿ ಬದಿಯಡ್ಕ ಬಸ್ಸು ತಂಗುದಾಣದ ಪಕ್ಕದಲ್ಲಿರುವ ಶಾಸ್ತ್ರೀಸ್ ಕಾಂಪ್ಲೆಕ್ಸ್‍ಗೆ ಸ್ಥಳಾಂತರಗೊಳ್ಳಲಿದೆ. ಇಂದು(ಜೂ. 17) ಬೆಳಗ್ಗೆ 8.45ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಬ್ಯಾಂಕ್ ಅಧ್ಯಕ್ಷ ಕೆ. ಗಣಪತಿ ಪ್ರಸಾದ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಹಕಾರಿ ಇಲಾಖೆಯ ಸಹಾಯಕ ನೊಂದಾವಣಾಧಿಕಾರಿ ವಿನೋದ್ ಕುಮಾರ್ ಸಿ. ಸೇಫ್ ಲಾಕರ್ ವ್ಯವಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಬದಿಯಡ್ಕ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಪಿ. ರಾಮಪ್ಪ ಮಂಜೇಶ್ವರ, ಬ್ಲಾಕ್ ಪಂಚಾಯಿತಿ ಸದಸ್ಯ ಮೊಯ್ದೀನ್ ಎಂ.ಎಸ್., ಸಹಕಾರ ಭಾರತೀ ಕಾಸರಗೋಡು ಜಿಲ್ಲಾ ಅಧ್ಯಕ್ಷ ಹಾಗೂ ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ, ನಿವೃತ್ತ ಕಾರ್ಯದರ್ಶಿ ಅಜಿತ ಕುಮಾರಿ ವಿ., ಬದಿಯಡ್ಕ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಅಧ್ಯಕ್ಷ ನರೇಂದ್ರ ಬಿ.ಎನ್., ಬ್ಯಾಂಕ್ ಮಾಜಿ ಅಧ್ಯಕ್ಷರುಗಳಾದ ವಿ.ಶ್ರೀಕೃಷ್ಣ ಭಟ್, ಕೆ.ವಿಷ್ಣು ಭಟ್ ಕೋರಿಕ್ಕಾರು, ಜಯದೇವ ಖಂಡಿಗೆ ಶುಭಾಶಂಸನೆಗೈಯ್ಯವರು. ಕಾರ್ಯದರ್ಶಿ ಪಿ.ವಿಷ್ಣು ಶರ್ಮ, ಉಪಾಧ್ಯಕ್ಷ ಅವಿನಾಶ್ ರೈ.ವಿ ಮೊದಲಾದವರು ನೇತೃತ್ವ ವಹಿಸುವರು.

