ಕಾಸರಗೋಡು: ಕುಂಡಂಗುಳಿಯ ಹೋಟೆಲ್‍ನಿಂದ 6500 ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ತಾಸುಗಳೊಳಗೆ ಬಂಧಿಸುವಲ್ಲಿ ಬೇಡಗಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮರುದಡ್ಕ ನಿವಾಸಿ, ಕುಂಡಂಗುಳಿಯ ಕ್ವಾರ್ಟರ್ಸ್‍ನಲ್ಲಿ ವಾಸಿಸುವ ಟಿ.ಕೆ ಹುಸೈನ್ (40)ಬಂಧಿತ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಗಿದ್ದು, ಎರಡು ವಾರಗಳ ರಿಮಾಂಡ್ ವಿಧಿಸಿದೆ. ಶನಿವಾರ ರಾತ್ರಿ ಕುಂಡಂಗುಳಿಯ ಹೋಟೆಲ್ ಒಂದರಿಂದ ಕಳವು ನಡೆದಿದೆ. ಹೋಟೆಲ್‍ನ ಹಿಂಭಾಗದ ಮೂಲಕ ಒಳಗೆ ನುಗ್ಗಿದ ಕಳ್ಳ, ಮೇಜಿನಲ್ಲಿರಿಸಿದ್ದ 6500 ರೂಪಾಯಿ ಕಳವು ನಡೆಸಿದ್ದು, ಮರುದಿನ ಬೆಳಿಗ್ಗೆ ಹೋಟೆಲ್ ತೆರೆಯಲು ತಲುಪಿದಾಗ ಕಳವು ವಿಷಯ ತಿಳಿದು, ಹೋಟೆಲ್‍ನ ಪಾಲುದಾರ ಗಾಳಿಮುಖ ನಿವಾಸಿ ಮೊಹಮ್ಮದ್ ಹಾರಿಸ್ ನೀಡಿದ ದೂರಿನಂತೆ ಬೇಡಗಂ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದರು. ತನಿಖೆಯಲ್ಲಿ ಹೋಟೆಲ್‍ನ ಮಾಜಿ ನೌಕರ ಟಿ.ಕೆ. ಹುಸೈನ್ ಕಳವುನಡೆಸಿರುವ ಮಾಹಿತಿ ಲಭಿಸಿದ್ದ, ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

