ಕಾಸರಗೋಡು: ವಸತಿಗೃಹವೊಂದರಲ್ಲಿ ಯುವತಿಯನ್ನು ಕಟ್ಟಿಹಾಕಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಕಾಸರಗೋಡು ನೆಲ್ಕಳ ನಿವಾಸಿ ವಿಷ್ಣು ಪ್ರಸಾದ್ ಅಲಿಯಾಸ್ ವಿಷ್ಣು (26)Éಂಬಾತನನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೂನ್ 13ರಂದು ಕಾಸರಗೋಡು ನಗರಕ್ಕೆ ಬಂದಿದ್ದ 19ರ ಹರೆಯದ ಯುವತಿಯಲ್ಲಿ ಕುಟುಂಬ ವಿಷಯದ ಬಗ್ಗೆ ಮಾತನಾಡಲಿರುವುದಾಗಿ ತಿಳಿಸಿ ಆರೋಪಿಈಕೆಯನ್ನು ಆಟೋ ರಿಕ್ಷಾಕ್ಕೇರಿಸಿ ನಗರದ ವಸತಿಗೃಹಕ್ಕೆ ಸಾಗಿಸಿ ಅಲ್ಲಿನ ಕೊಠಡಿಯಲ್ಲಿ ಆಕೆಯ ಮೊಬೈಲ್ ಫೆÇೀನ್ ಪಡೆದ ಬಳಿಕ ಲೈಂಗಿಕ ಕಿರುಕುಳ ನೀಡಲೆತ್ನಿಸಿದ್ದನು. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದಾಗ ಕಟ್ಟಿಹಾಕಿ ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಯುವತಿ ಪೆÇಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯನ್ನು ಪೆÇಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.


