ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂ. 21ರಂದು ಬೆಳಗ್ಗೆ 6.45ರಿಂದ 7.45ರ ವರೆಗೆ ಕಾಸರಗೋಡಿನ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರುಗಲಿದೆ.
ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ನಡೆಯುವುದು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಯೋಗ ಕಾರ್ಯಕ್ರಮ ಉದ್ಘಾಟಿಸುವರು. ವಿವಿಧ ಯೋಗ ಸ್ಪರ್ಧೆಗಳಲ್ಲಿ ಚಿನ್ನದ ಪದಕ ವಿಜೇತೆ ಮತ್ತು ಏಷ್ಯನ್ ಬುಕ್ ಆಫ್ ರೆಕಾಡ್ರ್ಸ್ ವಿಜೇತೆ ಕುಮಾರಿ ಅಭಿಜ್ಞಾ ಯೋಗ ತರಬೇತಿ ನೀಡಲಿದ್ದಾರೆ.
ಸಾವಯವ ಕೃಷಿ ಕಾರ್ಯಾಗಾರ:
ನರೇಂದ್ರ ಮೋದಿ ಸರ್ಕಾರದ 12ನೇ ವಾರ್ಷಿಕೋತ್ಸವದ ಅಂಗವಾಗಿ, ಜೂನ್ 21 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಕೊಟ್ಟಪ್ಪಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾವಯವ ಕೃಷಿ ಕಾರ್ಯಾಗಾರ ಜರುಗಲಿದೆ.
ಕೃಷಿಕ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಕಾರ್ಯಾಗಾರ ನಡೆಯಲಿದೆ. ಕೃಷಿಕ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ವಿ. ರಾಮಚಂದ್ರನ್ ಸಮಾರಂಭ ಉದ್ಘಾಟಿಸುವರು. ಬಿಜೆಪಿ ರಾಜ್ಯ ಸಮಿತಿ ಸದಸ್ಯ ಎ. ವೇಲಾಯುಧನ್ ಮುಖ್ಯ ಭಾಷಣ ಮಾಡಲಿದ್ದಾರೆ.

