ಆನ್‌ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಮ್) ವೆಬ್‌ಸೈಟ್‌ನಲ್ಲಿರುವ ದೋಷಗಳನ್ನು ನಿಕಟವಾಗಿ ಪರಿಶೀಲಿಸುತ್ತಿರುವುದಾಗಿ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಅದು ಹೇಳಿದೆ.
ವಿವಿಧ ಸರಕಾರಿ ಸಂಸ್ಥೆಗಳು ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳ ಸೈಬರ್ ಭದ್ರತಾ ಪರಿಣತರ ತಂಡವೊಂದು ಒಎಸ್‌ಎಮ್ ವ್ಯವಸ್ಥೆಯ ಭದ್ರತೆಯನ್ನು ಬಲಪಡಿಸಲು ಕಳೆದ ಕೆಲವು ದಿನಗಳಿಂದ ಕೆಲಸ ಮಾಡುತ್ತಿದೆ ಎಂದು ಸಿಬಿಎಸ್‌ಇ ತಿಳಿಸಿದೆ.
ಗುರುತಿಸಲಾದ ದೋಷಗಳನ್ನು ಸರಿಪಡಿಸಲಾಗಿದೆ ಮತ್ತು ಇತರ ಯಾವುದೇ ದೋಷಗಳನ್ನು ನಿವಾರಿಸಲು ಪ್ರಯತ್ನಗಳು ಸಾಗುತ್ತಿವೆ ಎಂದು ಅದು ಹೇಳಿದೆ.

