ಬೈರೂತ್: ದಕ್ಷಿಣ ಬೈರೂತ್‌ನ ಉಪನಗರಗಳ ಮೇಲೆ ಇಸ್ರೇಲ್ ಭಾನುವಾರ ವೈಮಾನಿಕ ದಾಳಿ ನಡೆಸಿದೆ.
'ಹಿಜ್ಬುಲ್ಲಾ ಬಂಡುಕೋರರ ಗುಂಪು ಉತ್ತರ ಇಸ್ರೇಲ್ ಕಡೆಗೆ ಈ ಹಿಂದೆ ಗುಂಡಿನ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ.
ಹಿಜ್ಬುಲ್ಲಾ ಆ ದಾಳಿಗಳ ಹೊಣೆಯನ್ನು ತಕ್ಷಣ ವಹಿಸಿಕೊಂಡಿಲ್ಲ.
ಲೆಬನಾನ್ ಮತ್ತು ಇಸ್ರೇಲ್ ನಡುವಿನ ಮೊದಲ ಕದನ ವಿರಾಮದ ಒಪ್ಪಂದವು ಏಪ್ರಿಲ್ 17ರಂದು ಜಾರಿಗೆ ಬಂದಿತ್ತು. ಆ ಬಳಿಕವೂ ಲೆಬನಾನ್‌ನ ನಗರ ಪ್ರದೇಶಗಳ ಮೇಲೆ ಇಸ್ರೇಲ್ ಎರಡು ಬಾರಿ ದಾಳಿ ಮಾಡಿತ್ತು. ದಕ್ಷಿಣ ಲೆಬನಾನ್‌ನಾದ್ಯಂತ ಪ್ರತಿದಿನವೂ ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ. ಅಲ್ಲಿ ಹಿಜ್ಬುಲ್ಲಾ ಬಂಡುಕೋರರು ಮತ್ತು ಇಸ್ರೇಲ್ ಯೋಧರ ನಡುವೆ ಘರ್ಷಣೆಗಳೂ ನಡೆದಿವೆ.
'ಈ ಪ್ರದೇಶದಲ್ಲಿ ಮೂರು ಬಾರಿ ಸ್ಫೋಟಗಳು ಸಂಭವಿಸಿವೆ' ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ, ಯಾವುದನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಸಾವು-ನೋವುಗಳ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.
ದಕ್ಷಿಣ ಬೈರೂತ್‌ನ ನಗರವೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಹಾನಿಯಾಗಿದೆ -ಎಎಫ್‌ಪಿ ಚಿತ್ರ

