HEALTH TIPS

ಗಡಿನಾಡಲ್ಲೂ ಮಹಿಳೆಯರ ಉಚಿತ ಸಂಚಾರಕ್ಕೆ ಚಾಲನೆ: ಮಂಜೇಶ್ವರದಲ್ಲಿ 'ಪ್ರಿಯದರ್ಶಿನಿ' ಯೋಜನೆಗೆ ಚಾಲನೆ ನೀಡಿದ ಶಾಸಕ

ಉಪ್ಪಳ: ಕೇರಳದ ಕೆ.ಎಸ್.ಆರ್.ಟಿ.ಸಿ. ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಬಹುನಿರೀಕ್ಷಿತ 'ಪ್ರಿಯದರ್ಶಿನಿ' ಯೋಜನೆ ಸೋಮವಾರ ಅಧಿಕೃತ ಚಾಲನೆ ನೀಡಲಾಗಿದ್ದು, ಮಂಜೇಶ್ವರ ಕ್ಷೇತ್ರದಲ್ಲೂ ಉದ್ಘಾಟನೆ ನೆರವೇರಿತು. 


ಉಪ್ಪಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಧ್ವಜ ಹಾರಿಸಿ, ಡಬಲ್ ಬೆಲ್ ಬಾರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು.

ಮೊದಲ ಟಿಕೆಟ್ ವಿತರಣೆ ಮತ್ತು ಸಂಭ್ರಮ:

ಕಾರ್ಯಕ್ರಮದ ಅಂಗವಾಗಿ ಬಸ್ಸಿನೊಳಗೆ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಕುಸುಮಾವತಿ ಅವರಿಗೆ ಶಾಸಕರು ಸಾಂಕೇತಿಕವಾಗಿ ಮೊದಲ '0' ಬೆಲೆಯ ಟಿಕೆಟ್ ನೀಡಿದರು. ಬಳಿಕ ಬಸ್ಸಿನ ಮೊದಲ ಸಂಚಾರಕ್ಕೆ ಶುಭ ಕೋರಿ ತೆಂಗಿನಕಾಯಿ ಒಡೆದು ಸಂಭ್ರಮಿಸಲಾಯಿತು.

ಈ ವೇಳೆ ನೆರೆದಿದ್ದ ಕಾರ್ಯಕರ್ತರು ಯುಡಿಎಫ್ ಸರ್ಕಾರ ಮತ್ತು ಶಾಸಕರಿಗೆ ಅಭಿನಂದನೆ ಸಲ್ಲಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ತೂಮಿನಾಡು, ಕುಂಜತ್ತೂರು ಮತ್ತು ಉದ್ಯಾವರ ಸೇರಿದಂತೆ ಹಲವೆಡೆ ಜನಪ್ರತಿನಿಧಿಗಳ ನೇತೃತ್ವದಲ್ಲಿ ಬಸ್ಸುಗಳನ್ನು ಭವ್ಯವಾಗಿ ಸ್ವಾಗತಿಸಲಾಯಿತು.

ದೈನಂದಿನ ಕೆಲಸ ಕಾರ್ಯಗಳಿಗಾಗಿ ಮಂಗಳೂರು, ಪುತ್ತೂರು, ಸುಳ್ಯಕ್ಕೆ ಸಂಚರಿಸುವ ಸಾವಿರಾರು ಗಡಿನಾಡ ಮಹಿಳೆಯರಿಗೆ ಈ ಯೋಜನೆ ದೊಡ್ಡ ಮಟ್ಟದ ನೆರವಾಗಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಡಿಸಿಸಿ ಕಾರ್ಯದರ್ಶಿಗಳಾದ ಸೋಮಶೇಖರ್ ಶೇಣಿ, ಲಕ್ಷ್ಮಣ ಪ್ರಭು ಕುಂಬಳೆ, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಸೃಫುಲ್ಲಾ ತಂಙಳ್ ಸಹಿತ ಪ್ರಮುಖ ಮುಖಂಡರು, ವಿವಿಧ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries