HEALTH TIPS

ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ಪವನ್ ಕಲ್ಯಾಣ್ ಸಿನಿಮಾ ತೋರಿಸಿದ ವೈದ್ಯರು! ಏಕೆ?

ಅಮರಾವತಿ: ಆಂಧ್ರ ಪ್ರದೇಶದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಿದುಳು ಗಡ್ಡೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯೊಬ್ಬರು ತಮ್ಮ ನೆಚ್ಚಿನ ನಟ ಪವನ್‌ ಕಲ್ಯಾಣ್ ಅವರ 'ದೇ ಕಾಲ್‌ ಹಿಮ್‌ ಓಜಿ' (They Call Him OG) ಸಿನಿಮಾ ವೀಕ್ಷಿಸಿದ್ದಾರೆ. ಈ ವಿಚಾರವೀಗ ಸಂಚಲನ ಸೃಷ್ಟಿಸಿದೆ.

ಮಾತು ಹಾಗೂ ಚಟುವಟಿಕೆಯನ್ನು ನಿಯಂತ್ರಿಸುವ ಮಿದುಳಿನ ಭಾಗದಲ್ಲಿ ಗೆಡ್ಡೆ ಇರುವುದನ್ನು ಪತ್ತೆ ಹಚ್ಚಿದ್ದ ವೈದ್ಯರು, ರೋಗಿಯನ್ನು ಎಚ್ಚರವಾಗಿ ಇರಿಸಿಯೇ ಶಸ್ತ್ರಚಿಕಿತ್ಸೆ ನಡೆಸುವುದು ಸೂಕ್ತ ಎಂದು ನಿರ್ಧರಿಸಿದರು. ಈ ವಿಧಾನಕ್ಕೆ 'Awake Brain Surgery' ಎನ್ನಲಾಗುತ್ತದೆ. ಹೀಗೆ, ಎಚ್ಚರವಿದ್ದೇ ಶಸ್ತ್ರಚಿಕಿತ್ಸೆಗೊಳಗಾಗದ ಮಹಿಳೆ ಪ್ರಕಾಶಂ ಜಿಲ್ಲೆಯ ನಿವಾಸಿ ಕೋಟೇಶ್ವರಮ್ಮ.

ಮಹಿಳೆಯು ಚಿಕಿತ್ಸೆ ವೇಳೆ ಶಾಂತವಾಗಿ ಇರುವಂತೆ ನೋಡಿಕೊಳ್ಳಲು ಮತ್ತು ಚಿಕಿತ್ಸೆ ವೇಳೆ ಅವರ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಅವರ ನೆಚ್ಚಿನ ನಟನ ಸಿನಿಮಾ ತೋರಿಸಲು ತೀರ್ಮಾನಿಸಲಾಯಿತು. ಹೀಗಾಗಿ, ಸಿನಿಮಾ ಇಲ್ಲಿ ಕೇವಲ ಮನರಂಜನೆಯಷ್ಟೇ ಅಲ್ಲ. ಅಕ್ಕೂ ಮಿಗಿಲಾದ ಪಾತ್ರ ನಿರ್ವಹಿಸಿದೆ.

ಮಿದುಳು ಗಡ್ಡೆಯನ್ನು ತೆರವುಗೊಳಿಸುವ ಶಸ್ತ್ರಚಿಕಿತ್ಸೆ ವೇಳೆ, ಹೆಚ್ಚಿನ ಸಂದರ್ಭದಲ್ಲಿ ತಲೆ ಬುರುಡೆಯ ಚಿಪ್ಪನ್ನು ತೆಗೆಯಲಾಗುತ್ತದೆ. ಆದರೆ, ಪ್ರತಿ ಸಂದರ್ಭದಲ್ಲಿಯೂ ಇದು ಕಡ್ಡಾಯವೇನಲ್ಲ. ಗಡ್ಡೆ ಎಲ್ಲಿದೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಅರಿವಳಿಕೆ ನೀಡಬಾರದೇಕೆ?
ಮಾತು, ಚಲನೆ, ದೃಷ್ಟಿ ಅಥವಾ ಸ್ಮರಣಶಕ್ತಿಯನ್ನು ನಿಯಂತ್ರಿಸುವಂತಹ ಮಿದುಳಿನ ನಿರ್ಣಾಯಕ ಜಾಗದಲ್ಲಿ ಗಡ್ಡೆ ಇದ್ದರೆ, ಅಂತಹ ರೋಗಿಯನ್ನು ಸಂಪೂರ್ಣ ನಿದ್ರೆಗೆ ಜಾರಿಸುವುದು (ಅರಿವಳಿಕೆ ನೀಡಿ ಪ್ರಜ್ಞೆ ತಪ್ಪಿಸುವುದು) ಅಪಾಯಕ್ಕೆ ದಾರಿಮಾಡಿಕೊಡಬಹುದು. ರೋಗಿಗೆ ಚಿಕಿತ್ಸೆ ವೇಳೆ ಏನಾದರೂ ತೊಂದರೆಯಾಗಿದೆ ಎಂಬುದು, ಅವರು ಎಚ್ಚರಗೊಳ್ಳುವವರೆಗೂ ವೈದ್ಯರಿಗೆ ಗೊತ್ತಾಗುವುದಿಲ್ಲ.

ಅಷ್ಟೇ ಅಲ್ಲ. ರೋಗಿಯನ್ನು ಎಚ್ಚರವಾಗಿಯೇ ಇಡುವುದರಿಂದ ಕೆಲವು ಅನುಕೂಲಗಳೂ ಇವೆ.

  • ಮಿದುಳಿನ ನಿರಂತರ ತಪಾಸಣೆ: ರೋಗಿಯು ಎಚ್ಚರವಾಗಿಯೇ ಇರುವುದರಿಂದ ಮಿದುಳಿನ ಕಾರ್ಯವನ್ನು ನಿರಂತರವಾಗಿ ಪರೀಕ್ಷಿಸಬಹುದು. ಗಡ್ಡೆ ಕತ್ತರಿಸುವ ವೇಳೆ ಮಿದುಳಿನ ನಿರ್ದಿಷ್ಟ ಭಾಗವನ್ನು ಸ್ಪರ್ಷಿಸಿದಾಗ (ಮಾತನಾಡುವ or ಕೈಗಳ ಚಲನೆ ಮೂಲಕ) ಪ್ರತಿಕ್ರಿಯಿಸಿದರೆ, ವೈದ್ಯರು ಎಚ್ಚರಿಕೆ ವಹಿಸಲು ಸಹಕಾರಿ..

  • ಆತಂಕ ತಪ್ಪಿಸಬಹುದು: ತಮ್ಮಿಷ್ಟದ ಸಿನಿಮಾ ನೋಡುವುದು, ಸಂಗೀತ ಕೇಳುವುದು ಅಥವಾ ನುಡಿಸುವುದರಿಂದ ರೋಗಿಯು ಆತಂಕಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಇದರಿಂದ, ಹೃದಯ ಬಡಿತವೂ ಸ್ಥಿರವಾಗಿರುತ್ತದೆ.

  • ಅರಿವಿನ ಮೇಲ್ವಿಚಾರಣೆ: ಶಸ್ತ್ರಚಿಕಿತ್ಸೆ ವೇಳೆ ಸಿನಿಮಾ ವೀಕ್ಷಿಸುವುದರಿಂದ ರೋಗಿಯ ನೈಜ ಸಮಯದಲ್ಲಿ ರೋಗಿಯ ವೀಕ್ಷಣಾ ಪ್ರಕ್ರಿಯೆ, ಏಕಾಗ್ರತೆ ಸಾಮರ್ಥ್ಯ, ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಮೇಲ್ವಿಚಾರಣೆ ನಡೆಸಬಹುದು.

ಪವನ್‌ ಕಲ್ಯಾಣ್‌, ಪ್ರಿಯಾಂಕಾ ಮೋಹನ್‌, ಪ್ರಕಾಶ್‌ ರಾಜ್‌ ಸೇರಿದಂತೆ ಹಲವು ಖ್ಯಾತನಾಮರು ನಟಿಸಿರುವ 'ಓಜಿ' ಸಿನಿಮಾ 2025ರ ಸೆಪ್ಟೆಂಬರ್‌ನಲ್ಲಿ ತೆರೆಕಂಡಿತ್ತು. 'ಡಿವಿವಿ ಎಂಟರ್‌ಟೇನ್ಮೆಂಟ್‌' ನಿರ್ಮಾಣ ಕಂಪನಿ ₹ 200 - ₹ 250 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಈ ಸಿನಿಮಾ, ಗಲ್ಲಾ ಪೆಟ್ಟಿಗೆಯಲ್ಲಿ ಸುಮಾರು 300 ಕೋಟಿ ಗಳಿಸಿದೆ ಎನ್ನಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries