ಉಪ್ಪಳ: ಉಪ್ಪಳ ಗ್ರಾಮಾಧಿಕಾರಿ ಕಚೇರಿಗೆ ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ಮಿಂಚಿನ ದಾಳಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ನೌಕರನನ್ನು ಬಂಧಿಸಿದ್ದಾರೆ. ವಿಲೇಜ್ ಆಫೀಸಿನ ಕಾಷ್ಯುಲ್ ಸ್ವೀಪರ್ ಹುದ್ದೆಯಲ್ಲಿದ್ದ ಉಪ್ಪಳ ಸಮೀಪದ ಕೋಡಿಬಯಲು ನಿವಾಸಿ ಶಿವಪ್ರಸಾದ್ ಬಂಧಿತ.
ಬಾಕಿಯಿರಿಸಿಕೊಂಡಿರುವ ಜಾಗದ ತೆರಿಗೆ ಪಾವತಿಯನ್ನು ಸುಲಭದಲ್ಲಿ ಮಾಡಿ ಕೊಡುವುದಾಗಿ ತಿಳಿಸಿ, ವ್ಯಕ್ತಿಯೊಬ್ಬರಿಂದ ಐದು ಸಾವಿರ ರೂ ಲಂಚ ಪಡೆಯುವ ವೇಳೆ ಕಾರ್ಯಾಚರಣೆ ನಡೆಸಲಾಗಿದೆ. ಲಂಚದ ಬೇಡಿಕೆಯಿರಿಸಿದ್ದ ಗ್ರಾಮಾಧಿಕಾರಿ ಕಚೇರಿ ಸಿಬ್ಬಂದಿ ವಿರುದ್ಧ ದೂರುದಾತರು ವಿಜಿಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ವಿಜಿಲೆನ್ಸ್ ಅಧಿಕಾರಿಗಳು ನೀಡಿದ ನಿರ್ದೇಶ ಪ್ರಕಾರ, ವ್ಯಕ್ತಿ ಸಿಬ್ಬಂದಿಗೆ ಹಣ ನೀಡಲು ಮುಂದಾಗುತ್ತಿದ್ದಂತೆ ಕಾರ್ಯಚರಣೆ ನಡೆಸಲಾಗಿತ್ತು. ಬಂಧಿತನನ್ನು ವಿಸ್ತೃತ ವಿಚಾರಣೆಗೆ ಒಳಪಡಿಸಲಾಗಿದೆ. ವಿಜಿಲೆನ್ಸ್ ಇನ್ಸ್‍ಪೆಕ್ಟರ್ ಪಿ. ನಾರಾಯಣನ್ ನೇತೃತ್ವದ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ.

.jpg)
