ಕಾಸರಗೋಡು: ಐಕ್ಯರಂಗ ಸರ್ಕಾರದ ಮೊದಲ ಬಜೆಟ್ ನಿರಾಶದಾಯಕವಾಗಿದ್ದು,ಈ ಹಿಂದಿನ ಎಡರಂಗ ಸರ್ಕಾರದ ನೌಕರವಿರೋಧಿ ಧೋರಣೆ ಮುಂದುವರಿದಿರುವುದಾಗಿ ಎನ್‍ಜಿಓ ಸಂಘ್ ಜಿಲ್ಲಾ ಸಮಿತಿ ಆರೋಪಿಸಿದೆ.
ಸರ್ಕಾರದ ಚೊಚ್ಚಲ ಬಜೆಟ್ ವಿರೋಧಿಸಿ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಸಂಘಟನೆ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕೇರಳದ ರಾಜ್ಯ ಸರ್ಕಾರಿ ನೌಕರರು ಬಹಳ ನಿರೀಕ್ಷೆಯೊಂದಿಗೆ ಕಾಯುತ್ತಿದ್ದ ಬಜೆಟ್ ತೀರಾ ಕಳಪೆಯಾಗಿದ್ದು, ಪೊಳ್ಳು ಭರವಸೆಗೆ ಮಾತ್ರ ಸೀಮಿತವಾಗಿದೆ. ಹಣಕಾಸು ಸಚಿವರೂ ಆಘಿರುವ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಮಂಡಿಸಿರುವ ಬಜೆಟ್ ಎಡ ಸರ್ಕಾರದ ಮುಮದುವರಿದ ಭಾಗವಾಗಿದೆ. ಎಡರಂಗ ಸರ್ಕಾರ ತಡೆಹಿಡಿದಿದ್ದ ನೌಕರರ ಸವಲತ್ತುಗಳು ಮತ್ತು ಹಕ್ಕುಗಳನ್ನು ಹಂತಹಂತವಾಗಿ ಜಾರಿಗೊಳಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ನೌಕರರಿಗೆ ಡಿಎ ನೀಡುವ ಘೋಷಣೆ ಮತ್ತು ರಜೆ ಶರಣಾಗತಿ ಇತ್ಯಾದಿಯ್ನು ಸರ್ಕಾರ ತಕ್ಷಣ ಜಾರಿಗೊಳಿಸಬೇಕು. ಎನ್‍ಜಿಒ ಸಂಘವು ನಿರೀಕ್ಷೆಯನ್ನಿರಿಸಿದ್ದ ಸರ್ಕಾರಿ ನೌಕರರಿಗೆ ಅನುಕೂಲಕರ ಘೋಷಣೆಗಳು ಯಾವುದೂ ಬಜೆಟ್‍ನಲ್ಲಿ ಒಳಪಡಿಸಲಾಗಿಲ್ಲ.
ಕಾಸರಗೋಡು ಸಿವಿಲ್ ಸ್ಟೇಷನ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಸಂಘಟನೆ ಕಾರ್ಯಕಾರಿ ಸದಸ್ಯ ಪೀತಾಂಬರನ್ ಮುಖ್ಯ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ರಂಜಿತ್ ಕೆ, ಜಿಲ್ಲಾ ಕಾರ್ಯದರ್ಶಿ ಸಂತೋಷ್ ವಿ.ಕೆ.ರವಿಕುಮಾರ್ ಕೊಟ್ಟೋಡಿ, ಅಭಿಜಿತ್, ಸತೀಶ್ ಮೊದಲಾದವರು ನೇತೃತ್ವ ವಹಿಸಿದ್ದರು.

