HEALTH TIPS

ಪ್ರತಿ ಮನೆಯಲ್ಲೂ ಗ್ರಂಥಾಲಯವಿರಲಿ: ವಾಚನಾ ದಿನಾರಣೆ ಕಾರ್ಯಕ್ರಮದಲ್ಲಿ ವಾಮನ್ ರಾವ್ ಬೇಕಲ್

ಕಾಸರಗೋಡು: ವಾಚನಾ ದಿನಾರಣೆ ದಿನವಾದ ಶುಕ್ರವಾರ ನಗರದ ಬಿಇಎಂ ಪ್ರೌಢ ಶಾಲಾ ಅಧ್ಯಾಪಕ, ವಿದ್ಯಾರ್ಥಿಗಳಿಂದ 'ಜೀವನದಲ್ಲಿ ಪುಸ್ತಕದ ಪ್ರಸಕ್ತಿ' ಎಂಬ ಕಾರ್ಯಕ್ರಮದ ಅಂಗವಾಗಿ ವಿಚಾರ ಗೋಷ್ಠಿ ನಡೆಯಿತು.  


ನಗರದ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಸಂಚಾಲಕರಾದ ವಾಮನ್ ರಾವ್ ಬೇಕಲ್ ಮುಖ್ಯ ಅತಿಥಿಯಾಗಿ ಆಗಮಿಸಿ ವಿಚಾರ ಮಂಡನೆ ಮಾಡಿದರು. ವಿದ್ಯಾಭ್ಯಾಸಕ್ಕಾಗಿ ಓದುವ ಪುಸ್ತಕಗಳೊಂದಿಗೆ, ಶ್ರೇಷ್ಠ ಜ್ಞಾನ ಪ್ರಾಪ್ತಿಗಾಗಿ ವಿದ್ವತ್‍ಪೂರ್ಣ ಪುಸ್ತಕಗಳನ್ನೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಪ್ರತಿ ಮನೆಯಲ್ಲಿ ಪುಟ್ಟ ಗ್ರಂಥಾಲಯವನ್ನು ಸ್ಥಾಪಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಿಇಎಮ್ ಪ್ರೌಢ ಶಾಲಾ ಪ್ರಾಂಶುಪಾಲ ಕೆ. ಪಿ. ರಾಜೇಶ್ಚಂದ್ರ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭ ಕನ್ನಡ ಭವನ ಗ್ರಂಥಾಲಯ ವತಿಯಿಂದ, ಡಾ. ವಾಮನ್ ರಾವ್ ಬೇಕಲ್ ಸುಮಾರು 3ಸಾವಿರ ರೂ. ಮೊತ್ತದ ಪುಸ್ತಕಗಳನ್ನು ಶಾಲಾ ಗ್ರಂಥಾಲಯ ಕ್ಕೆ ಹಸ್ತಾಂತರಿಸಿದರು. ಜತೆಗೆ ನುಳ್ಳಿಪ್ಪಾಡಿಯ ಕನ್ನಡ ಭವನ ಗ್ರಂಥಾಲಯಕ್ಕೆ ಒಂದು ದಿನದ "ಪುಸ್ತಕಗಳೊಂದಿಗೆ ಸಂವಾದ "ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಶಾಲಾ ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿದರು. 

ಪ್ರಾಧ್ಯಾಪಕ ಷಾಜಿ ಕೆ. ಎ. ಸ್ವಾಗತಿಸಿದರು. ಸ್ಟಾಫ್ ಸೆಕ್ರೆಟರಿ ಶ್ರೀಮತಿ ವೀಣಾ ಎಚ್. ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿ ಮುಖಂಡೆ ಅಂಜೆಲ್ ಮೇರಿ ಸಾಜನ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries