HEALTH TIPS

ವಿದ್ಯುತ್ ಕಂಬಗಳಲ್ಲಿ ಬ್ಯಾನರ್ ಸ್ಥಾಪಿಸಬಾರದು- ಕೆಎಸ್‍ಇಬಿ

ಕಾಸರಗೋಡು:  ಕೆ.ಎಸ್.ಇ.ಬಿ.(ಕೇರಳ ಸ್ಟೇಟ್ ಇಲೆಕ್ಟ್ರಿಸಿಟಿ ಬೋರ್ಡ್) ಯ ವಿದ್ಯುತ್ ವಿತರಣೆ ಶೃಂಖಲೆಗಳಲ್ಲಿ ಬ್ಯಾನರ್‍ಗಳು, ಫ್ಲೆಕ್ಸ್ ಬೋರ್ಡ್‍ಗಳು, ಹೋರ್ಡಿಂಗ್‍ಗಳನ್ನು ಸ್ಥಾಪಿಸಬಾರದೆಂದು ಕಾಸರಗೋಡು ಇಲೆಕ್ಟ್ರಿಸಿಟಿ ಸರ್ಕಲ್ ಡೆಪ್ಯುಟಿ ಚೀಫ್ ಇಂಜಿನಿಯರ್ ತಿಳಿಸಿದ್ದಾರೆ. ಈ ರೀತಿಯ ಬೋರ್ಡ್‍ಗಳು ಸ್ಥಾಪಿಸುವುದು ಗಂಭೀರ ವಿದ್ಯುತ್ ಅಪಘಾತಗಳಿಗೆ ಕಾರಣವಾಗಬ ಹುದು. ಈ ರೀತಿಯ ಚಟುವಟಿಕೆಗಳು ಕಾನೂನು ಬಾಹಿರ ಹಾಗೂ 2003ರ ಕೇಂದ್ರ ಇಲೆಕ್ಟ್ರಿಸಿಟಿ ಆಕ್ಟ್ ಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ. 

ಮಳೆ ಹಾಗೂ ಗಾಳಿ ಇರುವ ಸಮಯಗಳಲ್ಲಿ ಒದ್ದೆಯಾದ ಬ್ಯಾನರ್‍ಗಳು, ಫ್ಲೆಕ್ಸ್‍ಗಳು ವಿದ್ಯುತ್ ತಂತಿಗಳಿಗೆ ಸ್ಪರ್ಷಿಸುತ್ತಿರುವುದರ ಮೂಲಕ ದುರಂತಗಳು ಉಂಟಾಗಬಹುದು. ಅಲ್ಲದೆ ತಂತಿಗಳಿಗೆ ಉಂಟಾಗುವ ಹಾನಿಯನ್ನು ಪರಿಹರಿಸಲು ಕೆಎಸ್‍ಇಬಿ ನೌಕರರು ಕಂಬಗಳಿಗೆ ಹತ್ತುವುದಕ್ಕೆ ಈ ರೀತಿಯ ಬೋರ್ಡ್‍ಗಳು ತಡೆ ಸೃಷ್ಟಿಸುತ್ತಿವೆ.  ತೀವ್ರವಾದ ಗಾಳಿಗೆ  ಫ್ಲೆಕ್ಸ್‍ಗಳು ಹಾರಿ ಹೋಗಿ ತಂತಿಗಳಲ್ಲಿ ಸಿಲುಕಿಕೊಳ್ಳುತ್ತಿರುವ ಮೂಲಕ ಶಾರ್ಟ್ ಸಕ್ರ್ಯೂಟ್ ಕೂಡಾ ಉಂಟಾಗುತ್ತಿದ್ದು, ವಿದ್ಯುತ್ ಮೊಟಕಿಗೂ ಇದು ಕಾರಣವಾಗುತ್ತಿದೆ. ಆದುದರಿಂದ ಸಾರ್ವಜನಿಕರು, ವಿವಿಧ ಸಂಘಟನೆಗಳು, ರಾಜಕೀಯ, ಸಾಮಾಜಿಕ ಸಂಸ್ಥೆಗಳು ಈ ರೀತಿಯ ಸಾಮಗ್ರಿಗಳನ್ನು ವಿದ್ಯುತ್ ಶೃಂಖಲೆಗಳಲ್ಲಿ ಸ್ಥಾಪಿಸುವುದನ್ನು ಕೈ ಬಿಡಬೇಕೆಂದು, ವಿದ್ಯುತ್ ಕಂಬಗಳಿಗೆ ಅನುಮತಿರಹಿತ ಬಣ್ಣ ಹಚ್ಚುವುದು ಮೊದಲಾದ ಚಟುವಟಿಕೆಗಳನ್ನು ಮಾಡಬಾರದೆಂದು ಕೆಎಸ್‍ಇಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries