HEALTH TIPS

ಗ್ರಾಮದ ರಸ್ತೆಗೆ ಡಿಜಿಟಲ್‌ ಗುರುತು: ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಪ್ರಸ್ತಾವ

ನವದೆಹಲಿ (PTI): ಗ್ರಾಮಗಳ ಒಳಗಿನ ಪ್ರತಿಯೊಂದು ರಸ್ತೆಗೂ ವಿಶಿಷ್ಟ ಕೋಡ್, ಡಿಜಿಟಲ್ ಗುರುತು ಮತ್ತು ಪ್ರಮಾಣೀಕೃತ ವರ್ಗೀಕರಣವನ್ನು ನೀಡುವ ವ್ಯವಸ್ಥೆಯನ್ನು ಜಾರಿ ಮಾಡುವ ಪ್ರಸ್ತಾವವನ್ನು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯವು ಮುಂದಿಟ್ಟಿದೆ.

ಆಡಳಿತ ಸುಧಾರಣೆ, ಸೇವೆಗಳ ವಿತರಣೆ, ತುರ್ತು ಸ್ಪಂದನ ಮತ್ತು ಗ್ರಾಮೀಣ ಮೂಲಸೌಕರ್ಯವನ್ನು ಸುಧಾರಿಸುವ ಉದ್ದೇಶದಿಂದ ಈ ಪ‍್ರಸ್ತಾವವನ್ನು ಮುಂದಿಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಸ್ತಾವಿತ 'ಗ್ರಾಮದೊಳಗಿನ ರಸ್ತೆಗಳ ಕೋಡಿಂಗ್ ಮತ್ತು ಶ್ರೇಣೀಕರಣ ವ್ಯವಸ್ಥೆ' ಯೋಜನೆಗೆ ಚೌಕಟ್ಟು ರೂಪಿಸುವ ಉದ್ದೇಶದಿಂದ ಪ್ರಸ್ತಾವದ ಬಗ್ಗೆ ಶೀಘ್ರವೇ ಸಾರ್ವಜನಿಕರಿಂದ ಅಭಿಪ್ರಾಯ ವನ್ನು ‍ಪಡೆಯಲಾಗುವುದು ಎಂದು ತಿಳಿಸಿವೆ.

ಪ್ರಸ್ತಾವಿತ ಯೋಜನೆಯಡಿಯಲ್ಲಿ ಗ್ರಾಮಗಳ ರಸ್ತೆಗಳನ್ನು ಮುಖ್ಯ ರಸ್ತೆಗಳು, ತಿರುವು ರಸ್ತೆಗಳು ಮತ್ತು ಇತರ ಅಥವಾ ಸಂಪರ್ಕಿಸುವ ರಸ್ತೆಗಳು ಎಂದು ಮೂರು ವಿಧವಾಗಿ ವಿಂಗಡಿಸಲಾಗುತ್ತದೆ. ಪ್ರತಿ ರಸ್ತೆಗೂ ಅಕ್ಷರಗಳು ಮತ್ತು ಸಂಖ್ಯೆಗಳ ಸಂಯೋಜನೆಯಿರುವ ಕೋಡ್‌ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries