ನವದೆಹಲಿ: ಮೂರು ತಿಂಗಳಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಮಂಗಳವಾರ ಪ್ರತಿ ಬ್ಯಾರಲ್ ಗೆ 80 ಡಾಲರ್ ಗಿಂತ ಕೆಳಗಿಳಿದಿದೆ. ಇದು ತೈಲ ಮಾರಾಟ ಕಂಪನಿಗಳು ಇಂಧನ ದರಗಳನ್ನು ಪ್ರಸ್ತುತ ಮಟ್ಟದಲ್ಲೇ ಕಾಯ್ದುಕೊಳ್ಳಲು ಸಹಾಯ ಮಾಡಲಿದೆ.
ಕಚ್ಚಾ ತೈಲದ ಮೇಲಿನ ಈ ಲಾಭಗಳು ಹೀಗೆಯೇ ಮುಂದುವರಿದರೆ, ಇದು ಸರ್ಕಾರದ ಹಣಕಾಸು ಪರಿಸ್ಥಿತಿಗೆ ಸಹಾಯ ಮಾಡುವುದರ ಜೊತೆಗೆ ಹಣದುಬ್ಬರವು ಹೆಚ್ಚಾಗದಂತೆ ತಡೆಯಲಿದೆ.
ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳ ಫಲಿತಾಂಶಗಳ ಆಧಾರದಲ್ಲಿ ಯಾವುದೇ ಅಂದಾಜುಗಳನ್ನು ಮಾಡುವ ಬಗ್ಗೆ ಕಂಪೆನಿಗಳು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಆದರೆ ಮಾರುಕಟ್ಟೆಗಳು ಹೆಚ್ಚು ಆಶಾದಾಯಕವಾಗಿರುವಂತೆ ತೋರುತ್ತಿವೆ.
ಕಳೆದ ಎರಡು ದಿನಗಳಲ್ಲಿ ಜಾಗತಿಕ ಬೆಲೆಗಳ ಕುಸಿತದ ನಡುವೆಯೂ ತೈಲ ಮಾರಾಟ ಕಂಪನಿಗಳ ಷೇರುಗಳು ಭಾರಿ ಏರಿಕೆ ಕಂಡಿವೆ .
"ಇದು ಬಹುಶಃ ನೆರವಾಗಲಿದೆ. ಸುಸ್ಥಿರ ಬೆಲೆಯು ಬೇಡಿಕೆ-ಪೂರೈಕೆಯನ್ನು ಅವಲಂಬಿಸಿರುತ್ತವೆ. ತೈಲ ಮಾರುಕಟ್ಟೆ ಕಂಪನಿಗಳು ಈಗಲೂ ಹಣ ಕಳೆದುಕೊಳ್ಳುತ್ತಿದ್ದು, ಎಕ್ಸೈಸ್ ಸುಂಕ ಕಡಿತದ ಮೂಲಕ ಸರ್ಕಾರಕ್ಕೆ ಒಂದಷ್ಟು ನೆರವಾಗಿದೆ. ಒಂದು ವೇಳೆ ತೈಲ ಬೆಲೆ ಇಳಿದು ಕೆಲ ಸಮಯದ ವರೆಗೆ ಕೆಳಮಟ್ಟದಲ್ಲೇ ಇದ್ದಲ್ಲಿ, ಬೆಲೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಬಹುದಾಗಿದೆ" ಎಂದು ಕ್ರಿಸಿಲ್ ನ ಮುಖ್ಯ ಅರ್ಥಶಾಸ್ತ್ರಜ್ಞ ಡಿ.ಕೆ.ಜೋಶಿ ಹೇಳಿದ್ದಾರೆ.
ಸೋಮವಾರ ಬ್ರೆಂಟ್ ದರ ಪ್ರತಿ ಬ್ಯಾರಲ್ ಗೆ 83 ಡಾಲರ್ ಗೆ ಇಳಿದಿದೆ. ಭಾರತೀಯ ತೈಲ ಸಂಸ್ಕರಣೆಗೆ ತಗುಲುವ ವೆಚ್ಚ 82.84 ಡಾಲರ್ ಎಂದು ಅಂದಾಜಿಸಲಾಗಿದ್ದು, ಅಂತರವು ಕಡಿಮೆಯಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಆದರೆ ಗ್ರಾಹಕರಿಗೆ ತಗುಲುವ ವೆಚ್ಚ ಕಚ್ಚಾ ತೈಲದ ಕಾರ್ಯನಿರ್ವಹಣೆಗೆ ಸಂಬಂಧಿಸುವ ಬದಲು ಅಂತರರಾಷ್ಟ್ರೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಸಂಬಂಧಿಸಿರುತ್ತದೆ. ಜೂನ್ ನಲ್ಲಿ ಇದು ಅನುಕ್ರಮವಾಗಿ ಶೇಕಡ 22 ಮತ್ತು 43ರಷ್ಟಾಗಿದೆ.
ರಸಗೊಬ್ಬರಕ್ಕೆ ಒದಗಿಸುವ ಬೆಂಬಲವನ್ನು ದ್ವಿಗುಣಗೊಳಿಸುವ ಒತ್ತಡ ಕೇಂದ್ರದ ಮೇಲಿರುವುದರಿಂದ ಹಾಗೂ ಸಬ್ಸಿಡಿ ದರದಲ್ಲಿ ಅನಿಲ ಸಿಲಿಂಡರ್ ಗಳನ್ನು ಮಾರಾಟ ಮಾಡುವ ಹೊರೆಯನ್ನು ಭರಿಸುವ ಒತ್ತಡದ ಹಿನ್ನೆಲೆಯಲ್ಲಿ , ಸಂಘರ್ಷ ಶಮನಗೊಂಡಿರುವುದು ಮತ್ತು ತೈಲ ಹಾಗೂ ರಸಗೊಬ್ಬರ ಬೆಲೆ ಇಳಿಕೆ ಸರ್ಕಾರಕ್ಕೆ ನೆರವಾಗಲಿದೆ.

