ನವದೆಹಲಿ: ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಹದಿನಾರು ತಿಂಗಳ ಬಳಿಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಿದರು. ಜತೆಗೆ ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ, ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಮತ್ತು ಯುಎಇ ಅಧ್ಯಕ್ಷ ಮೊಹ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಜತೆಗೂ ಅಧಿಕೃತ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಮೋದಿ ಹಾಗೂ ಟ್ರಂಪ್ ಸಂಪರ್ಕ ಅಧಿವೇಶನದಲ್ಲಿ ಅಕ್ಕಪಕ್ಕದಲ್ಲಿ ಕುಳಿತಿದ್ದರು. ಉಭಯ ಮುಖಂಡರು ಪರಸ್ಪರ ಹಸ್ತಲಾಘವದ ಮೂಲಕ ಶುಭಾಶಯ ಕೋರಿದರು. ಹಿಂದಿನ ಭೇಟಿಗಳಂತೆ ಪರಸ್ಪರರು ಆಲಿಂಗಿಸಿಕೊಳ್ಳಲಿಲ್ಲ. ಉಭಯ ಮುಖಂಡರು ಪರಸ್ಪರ ಮಾತುಕತೆ ನಡೆಸಿದ್ದನ್ನು ಬಿಂಬಿಸುವ ವಿಡಿಯೊವನ್ನು ಮೋದಿ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ.
ಬುಧವಾರ ಶೃಂಗಸಭೆಯ ವಿರಾಮದ ವೇಲೆ ಉಭಯ ಮುಖಂಡರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

