HEALTH TIPS

ಭಾರತೀಯ ನಾವಿಕರ ಜೀವಹಾನಿ: ಟ್ರಂಪ್ ಸಮ್ಮುಖದಲ್ಲೇ ಮೋದಿ ಕಳವಳ

 ನವದೆಹಲಿ:  ಜಿ-7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಕ್ಕದಲ್ಲೇ ಆಸೀನರಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರು , ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಅಮೆರಿಕ ದಾಳಿಯಲ್ಲಿ ಭಾರತೀಯ ನಾವಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಸುರಕ್ಷತೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. 


"ಹೊಸ ಪಾಲುದಾರಿಕೆ ರೂಪಿಸುವುದು ಮತ್ತು ಅಂತರರಾಷ್ಟ್ರೀಯ ಒಗ್ಗಟ್ಟು" ಎಂಬ ವಿಷಯದ ಬಗೆಗಿನ ಚರ್ಚೆಯ ವೇಳೆ ಮಾತನಾಡಿದ ಮೋದಿ ಮಧ್ಯಪ್ರಾಚ್ಯ ಸಂಘರ್ಷವು ಈ ಭಾಗದ ಎಲ್ಲ ದೇಶಗಳಿಗೆ ದೊಡ್ಡ ಪ್ರಮಾಣದ ಮಾನವ ಮತ್ತು ಆರ್ಥಿಕ ನಷ್ಟ ಉಂಟುಮಾಡಿದೆ ಎಂದು ಹೇಳಿದರು.

"ಪಶ್ಚಿಮ ಏಷ್ಯಾದ ಶಾಂತಿ ಪ್ರಯತ್ನಗಳ ನಿಟ್ಟಿನಲ್ಲಿ ಸಾಧಿಸಲಾದ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಸಂಘರ್ಷದಿಂದಾಗಿ ಈ ಭಾಗದಲ್ಲಿ ನಮ್ಮ ಹಲವು ಮಿತ್ರ ದೇಶಗಳಲ್ಲಿ ಜೀವಹಾನಿ ಮತ್ತು ಆಸ್ತಿಪಾಸ್ತಿಗಳಿಗೆ ನಷ್ಟ ಉಂಟಾಗಿದೆ. ಹಾರ್ಮುಝ್ ಜಲಸಂಧಿಯಲ್ಲಿ ಸಂಚಾರ ವ್ಯತ್ಯಯವಾಗಿದ್ದರಿಂದ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಹಲವು ಭಾರತೀಯ ನಾಗರಿಕರು ಕೂಡಾ ಜೀವ ಕಳೆದುಕೊಂಡಿದ್ದಾರೆ" ಎಂದು ಮೋದಿ ಹೇಳಿದರು.

ಭಾರತೀಯ ಸಿಬ್ಬಂದಿ ಇದ್ದ ಪಲಾವು ದೇಶದ ತೈಲ ಟ್ಯಾಂಕರ್ ಮೇಲೆ ಒಮಾನ್ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ಪಡೆಗಳು ನಡೆಸಿದ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿಯಾಗಿದ್ದರು. ಇರಾನ್ ಬಂದರುಗಳ ಮೇಲೆ ಅಮೆರಿಕ ವಿಧಿಸಿದ್ದ ದಿಗ್ಬಂಧನ ಉಲ್ಲಂಘಿಸಿದ್ದಕ್ಕೆ ಅಥವಾ ಇರಾನಿನ ತೈಲ ಸಾಗಾಣಿಕೆ ಮಾಡಲು ಪ್ರಯತ್ನಿಸಿದ್ದಕ್ಕೆ ಈ ದಾಳಿ ನಡೆಸಿದ್ದಾಗಿ ಅಮೆರಿಕ ಹೇಳಿಕೊಂಡಿತ್ತು. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries