ಕಾಸರಗೋಡು: ನಿರಂತರವಾಗಿ ಮಾದಕದ್ರವ್ಯ ದಂಧೆಯಲ್ಲಿ ನಿರತರಾಗಿರುವವರನ್ನು ಪತ್ತೆಹಚ್ಚಿ ವಿಚಾರಣೆ ಗೊಳಪಡಿಸದೆ ಅವರನ್ನು ನೇರವಾಗಿ ಜೈಲಿಗಟ್ಟುವ ಪಿಟ್ ಎನ್‍ಡಿಪಿಎಸ್ ಆ್ಯಕ್ಟ್ ಪ್ರಕಾರ ಚೆಂಗಳ ರೆಹ್ಮತ್‍ನಗರ ನಿವಾಸಿ ನುಹ್‍ಮಾನ್ ಸಿ.ಜೆಡ್ (25) ಎಂಬಾತನನ್ನು ವಿದ್ಯಾನಗರ ಪೆÇಲೀಸರು ಬಂಧಿಸಿದ್ದಾರೆ. ಈತನನ್ನು ನಂತರ ತಿರುವನಂತಪುರದ ಪೂಜಾ¥ಕೇಂದ್ರಕಾರಾಗೃಹಕ್ಕೆ ಕರೆದೊಯ್ಯಲಾಗಿದೆ. ಬಂಧಿತನ ವಿರುದ್ಧ ಬದಿಯಡ್ಕ, ಕಾಸರಗೋಡು, ವಿದ್ಯಾನಗರ ಸೇರಿದಂಎ ವಿವಿಧ ಠಾಣೆಗಳಲ್ಲಿ ಮಾದಕದ್ರವ್ಯ ಸಾಗಾಟದ ಪ್ರಕರಣ ದಾಖಲಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಈತನ ಬಂಧನದ ಮೂಲಕ ಪಿಟ್ ಎನ್‍ಡಿಪಿಎಸ್ ಆ್ಯಕ್ಟ್ ಪ್ರಕಾರ ಜಿಲ್ಲೆಯಲ್ಲಿ ಬಂಧಿತರಾದವರ ಸಂಖ್ಯೆ ಈಗ 19ಕ್ಕೇರಿದೆ.
ಆಪರೇಶನ್ ತೂಫಾನ್ ಕಾರ್ಯಾಚರಣೆಯ ಅಂಗವಾಗಿ ಮಾದಕದ್ರವ್ಯ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಿ ಅವರನ್ನು ಪಿಟ್ ಎನ್‍ಡಿಪಿಎಸ್ ಆ್ಯಕ್ಟ್ ಪ್ರಕಾರ ಬಂಧಿಸುವ ಕಾರ್ಯಾಚರಣೆಯನ್ನು ಪೆÇಲೀಸರು ಚುರುಕುಗೊಳಿಸಿದ್ದಾರೆ.


