ಮಂಜೇಶ್ವರ: ಹೊಸಂಗಡಿಯ ವಸತಿಗೃಹವೊಂದಕ್ಕೆ ಮಂಜೇಶ್ವರ ಠಾಣೆ ಪೆÇಲೀಸರು ದಾಳಿ ನಡೆಸಿ, ಎಂಡಿಎಂಎ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ವಂಚ್ಕಂಪಾಡಿ ಪಳ್ಳಿಗುಡ್ಡೆ ಹೌಸ್‍ನ ಅಹಮ್ಮದ್ ಸೈಫುದ್ದೀನ್ (21) ಹಾಗೂ ಹೊಸಬೆಟ್ಟು ಗುಡ್ಡೇಕೇರಿ ನಿವಾಸಿ ಮುಹಮ್ಮದ್ ಮುಸ್ತಾಕ್ (36)ಬಂಧಿತರು. ಮಂಜೇಶ್ವರ ಠಾಣೆ ಎಸ್‍ಐ ಉಮೇಶ್ ಕೆ.ಆರ್. ನೇತೃತ್ವದ ಪೆÇಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ವಸತಿಗೃಹದ ಕೋಠಡಿಯೊಳಗೆ ದಾಸ್ತಾನಿರಿಸಿದ್ದ 1.61 ಗ್ರಾಂ ಎಂಡಿಎಂಎ ಹಾಗೂ 38.33 ಗ್ರಾಂ ಗಾಂಜಾವನ್ನು ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಗುಪ್ತ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿ ಅಹಮ್ಮದ್ ಸೈಫುದ್ದೀನ್ ವಿರುದ್ಧ ಎಂಡಿಎಂಎ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪೋಲೀಸ್ ಠಾಣೆಯಲ್ಲಿ ಈ ಹಿಂದೆ ಎರಡು ಕೇಸುಗಳು ದಾಖಲಾಗಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.
ಹೊಸಂಗಡಿ ವಸತಿಗೃಹಕ್ಕೆ ದಾಳಿ ಎಂಡಿಎಂಎ, ಗಾಂಜಾ ವಶ, ಇಬ್ಬರ ಸೆರೆ
0
ಜೂನ್ 18, 2026

Tags