HEALTH TIPS

ನಿಫಾ ಬಗ್ಗೆ ಆತಂಕಪಡುವ ಅಗತ್ಯವಿಲ್ಲ; ಕೇರಳ ಆರೋಗ್ಯ ಸಚಿವ

 ಕೋಝಿಕ್ಕೋಡ್: ಫೆರೊಕ್ ಮೂಲದ ವ್ಯಕ್ತಿಗೆ ನಿಫಾ ವೈರಸ್ ಪತ್ತೆಯಾದ ಬೆನ್ನಲೇ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರನ್ನು ಹೊರತು ಪಡಿಸಿ ರಾಜ್ಯದಲ್ಲಿ ಹೊಸ ಪ್ರಕರಣ ದಾಖಲಾಗಿಲ್ಲ ಎಂದು ಕೇರಳ ಆರೋಗ್ಯ ಸಚಿವ ಕೆ ಮುರಳೀಧರನ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನಿಫಾ ತಡೆಗಟ್ಟುವ 'ರಿಬಾವಿರಿನ್ ಡೋಸ್' ಭಾರತದಲ್ಲಿ ಲಭ್ಯವಿಲ್ಲದ ಕಾರಣ ಬಹ್ರೇನ್‌ನಿಂದ ಖರೀದಿಸಿದ್ದೇವೆ.

ಈಗಾಗಲೇ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಫೆರೊಕ್ ಮೂಲದ ವ್ಯಕ್ತಿಗೆ ರಿಬಾವಿರಿನ್ ಮೊದಲ ಡೋಸ್ ಅನ್ನು ನೀಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅನೇಕರನ್ನು ತಪಾಸಣೆ ನಡೆಸಿದ್ದೇವೆ. ಅವರೆಲ್ಲರಿಗೂ ನಕಾರಾತ್ಮಕ ಫಲಿತಾಂಶಗಳು ಬಂದಿವೆ' ಎಂದಿದ್ದಾರೆ.

ಅವರನ್ನು ಹೊರತು ಪಡಿಸಿ ಇನ್ನೂ1ಸಾವಿರಕ್ಕೂ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಿದ್ದೇವೆ.ಅದಾಗಿಯೂ, ರಾಮನತ್ತುಕರ ಪುರಸಭೆಯ ವಾರ್ಡ್ 5 ರಲ್ಲಿ 370 ಮನೆಗಳು ಮತ್ತು 1,047 ಜನರನ್ನು ಒಳಗೊಂಡ ಸಮೀಕ್ಷೆಯಲ್ಲಿ ಯಾರಿಗೂ ನಿಫಾ ಲಕ್ಷಣಗಳು ಕಂಡುಬಂದಿಲ್ಲ' ಎಂದು ಮಾಹಿತಿ ನೀಡಿದ್ದಾರೆ.

ಮುಂದುವರೆದು.. ಕೇರಳದ ವಿವಿಧೆಡೆ ಜನವರಿ 1 ರಿಂದ ಈವರೆಗೆ 'ಶಿಗೆಲ್ಲಾ ಸೋಂಕು' 135 ಪ್ರಕರಣ ದೃಢಪಟ್ಟಿವೆ. ಕೋಯಿಕೋಡ್‌ನಲ್ಲಿ 68, ವಯನಾಡಿನಲ್ಲಿ 16, ಪಾಲಕ್ಕಾಡ್‌ನಲ್ಲಿ 14, ಮಲಪ್ಪುರಂನಲ್ಲಿ 13, ಕೊಲ್ಲಂ ಮತ್ತು ಆಲಪ್ಪುಳದಲ್ಲಿ 6, ತ್ರಿಶೂರ್‌ನಲ್ಲಿ4, ಇಡುಕ್ಕಿಯಲ್ಲಿ 3, ಎರ್ನಾಕುಲಂ ಕಣ್ಣೂರಿನಲ್ಲಿ 2 ಪ್ರಕರಣ ದೃಢಪಟ್ಟಿವೆ.

ಕೋಯಿಕೋಡ್‌ ಜಿಲ್ಲೆಯಲ್ಲಿ ಈ ಸೋಂಕಿನಿಂದ 3 ಹಾಗೂ4 ವರ್ಷದ ಇಬ್ಬರು ಮಕ್ಕಳು ಮತ್ತು 59 ವರ್ಷದ ಮಹಿಳೆ ಸೇರಿ ಮೂವರು ಮೃತಪಟ್ಟಿದ್ದಾರೆ. ಸದ್ಯ, ರೋಗಲಕ್ಷಣ ಇರುವ ನಾಲ್ಕು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ' ಎಂದು ತಿಳಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries