HEALTH TIPS

ಅಫ್ಘಾನಿಸ್ತಾನಕ್ಕೆ ಭಾರತದಿಂದ ಐದು ಟನ್ ವೈದ್ಯಕೀಯ ನೆರವು ಪೂರೈಕೆ

 ನವದೆಹಲಿ: ಭಾರತವು ಬುಧವಾರ ಮಾನವೀಯ ನೆರವಿನ ಅಡಿಯಲ್ಲಿ 5 ಟನ್ ಅತ್ಯಗತ್ಯ ಔಷಧಿಗಳನ್ನು ಮತ್ತು ವೈದ್ಯಕೀಯ ಉಪಕರಣಗಳನ್ನು ಅಫ್ಘಾನಿಸ್ತಾನಕ್ಕೆ ಪೂರೈಸಿದೆ.


ಭಾರತವು ಕಾಬೂಲ್‌ಗೆ ಇನ್ನೂ ಐದು ಟನ್ ಅತ್ಯಗತ್ಯ ಔಷಧಿಗಳನ್ನು ತಲುಪಿಸಿದೆ. ಇದು ಅಫ್ಘಾನ್ ಜನರ ಕಲ್ಯಾಣ ಮತ್ತು ಮಾನವೀಯ ನೆರವಿಗೆ ಭಾರತದ ಶಾಶ್ವತ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜೂ.11 ರಂದು ಪುನರುಚ್ಚರಿಸಿತ್ತು. ರೋಗನಿರ್ಣಯ, ಚಿಕಿತ್ಸೆ ಮತ್ತು ವಿಶೇಷ ಆರೈಕೆಗಾಗಿ ವೈದ್ಯಕೀಯ ಉಪಕರಣಗಳನ್ನು ಅಫ್ಘಾನ್ ಆರೋಗ್ಯ ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡುವುದಾಗಿ ಅದು ಘೋಷಿಸಿತ್ತು.

ಭಾರತವು ನವಜಾತ ಶಿಶು ಮತ್ತು ಮಕ್ಕಳ ಆರೈಕೆ ಸಾಧನಗಳು, ಕಾರ್ಡಿಯೋಗ್ರಾಫ್ ಯಂತ್ರ,ವೆಂಟಿಲೇಟರ್‌ಗಳು,ರೋಗಿಗಳ ಮಾನಿಟರ್‌ಗಳು,ಮ್ಯಾಕ್ಸಿಲೊಫೇಶಿಯಲ್ ಎಲೆಕ್ಟ್ರೋಕಾಟರಿ, ಪ್ಲಾಸ್ಟಿಕ್ ಸರ್ಜರಿ ಸೆಟ್‌ಗಳು ಮತ್ತು ವಿಶೇಷ ವೈದ್ಯಕೀಯ ಕಿಟ್‌ಗಳನ್ನು ಒಳಗೊಂಡಂತೆ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ವೈದ್ಯಕೀಯ ಉಪಕರಣಗಳನ್ನು ಅಫ್ಘಾನ್ ಆರೋಗ್ಯ ಅಧಿಕಾರಿಗಳಿಗೆ ಉಡುಗೊರೆಯಾಗಿ ನೀಡಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.

ಅಫ್ಘಾನ್ ಜನರ ಕಲ್ಯಾಣಕ್ಕಾಗಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ನಿರಂತರ ಮಾನವೀಯ ನೆರವು, ಅಭಿವೃದ್ಧಿ ಸಹಕಾರ ಮತ್ತು ಸಾಮರ್ಥ್ಯ ವೃದ್ಧಿ ಉಪಕ್ರಮಗಳ ಮೂಲಕ ಅಫ್ಘಾನಿಸ್ತಾನದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸರಕಾರವು ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries