HEALTH TIPS

ಸರ್ಕಾರಿ ನೌಕರರ ಸೌಲಭ್ಯಗಳನ್ನು ಬಜೆಟ್‍ನಲ್ಲಿ ಒಳಪಡಿಸಿ ಮಂಜೂರು ಮಾಡಬೇಕು- ಎನ್‍ಜಿಒ ಅಸೋಸಿಯೇಶನ್

 ಕಾಸರಗೋಡು: ಸರ್ಕಾರಿ ನೌಕರರ, ಅಧ್ಯಾಪಕರ ಸೌಲಭ್ಯಗಳನ್ನು ಬಜೆಟ್‌ನಲ್ಲಿ ಒಳಪಡಿಸಿ ಮಂಜೂರು ಮಾಡಬೇಕೆಂದು ಕೇರಳ ಎನ್‌ಜಿಒ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ಸುರೇಶ್ ಪೆರಿಯಂಗಾನಂ ಆಗ್ರಹಿಸಿದ್ದಾರೆ.  


ಪಿಂಚಣಿ ಪ್ರಾಯ ಹೆಚ್ಚಿಸಿ ಸಂಯೋಜಿಸಬೇಕು, ನೌಕರರಿಗೆ ಉಪಯುಕ್ತವಾದ ರೀತಿಯಲ್ಲಿ ವೇತನ ಪರಿಷ್ಕರಣೆ ಜ್ಯಾರಿಗೊಳಿಸಬೇಕು, ಮೆಡಿಸೆಫ್ ದ್ವಿತೀಯ ಹಂತ ನೌಕರರಿಗೆ ಉಪಕಾರಪ್ರದಗೊಳಿಸಬೇಕು, ಸಹಭಾಗಿತ್ವ ಪಿಂಚಣಿ ವಿಭಾಗ ನೌಕರರ ಆತಂಕಗಳನ್ನು ಪರಿಹರಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಸೋಸಿಯೇಶನ್ ಜಿಲ್ಲಾ ಸಮಿತಿ ಸಿವಿಲ್ ಸ್ಟೇಶನ್‌ನಲ್ಲಿ ನಡೆಸಿದ ಹಕ್ಕು ಸಂರಕ್ಷಣಾ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕ್ಷಾಮಭತ್ತೆಯ ಇದುವರೆಗಿನ ಉಳಿಸಿಕೊಂಡ ಮೊತ್ತ, ನಿಸ್ತೇಜಗೊಳಿ ಸಿದ ಲೀವ್ ಸರಂಡರ್, ವಸತಿ ಸಾಲ, ಸಿಸಿಎ ಮೊದಲಾದವುಗಳನ್ನು ಕೂಡಲೇ ಮಂಜೂರುಗೊಳಿಸಬೇಕೆಂದು ಹಾಗೂ ವೇತನ ಪರಿಷ್ಕರಣೆ ಜ್ಯಾರಿಗೊಳಿಸ ಬೇಕೆಂದು ಆಗ್ರಹಿಸಲಾಯಿತು. ಜಿಲ್ಲಾ ಅಧ್ಯಕ್ಷ ಎ.ಟಿ. ಶಶಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಸೆಕ್ರೆಟರಿಯೇಟ್ ಸದಸ್ಯರಾದ ಕೆ.ಸಿ. ಸುಜಿತ್ ಕುಮಾರ್, ವತ್ಸಲಕೃಷ್ಣನ್, ರಾಜ್ಯ ಸಮಿತಿ ಸದಸ್ಯರಾದ ಸಿ.ಕೆ. ಅರುಣ್ ಕುಮಾರ್, ಬ್ರಿಜೇಶ್ ಪೈನಿ, ರನಿಲ್‌ಸನ್ ಕೆ. ಥೋಮಸ್, ಎಂ.ವಿ. ನಿಗೀಶ್, ಜಿಲ್ಲಾ ಕಾರ್ಯದರ್ಶಿ ವಿಟಿಪಿ ರಾಜೇಶ್, ಜಿಲ್ಲಾ ಕೋಶಾಧಿಕಾರಿ ವಿ.ಎಂ. ರಾಜೇಶ್, ಎಂ. ಮಾಧವನ್ ನಂಬ್ಯಾರ್ ಸಹಿತ ಹಲವರು ಮಾತನಾಡಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries