HEALTH TIPS

Jharkhand | ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನದ ಭೀತಿ: ಎನ್‌ಡಿಎ ಶಾಸಕರು ಹೊಟೇಲ್‌ಗೆ ಶಿಫ್ಟ್

ನವದೆಹಲಿ: ಜಾರ್ಖಂಡ್‌ನಲ್ಲಿ ರಾಜ್ಯಸಭೆಯ ಎರಡು ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಅಡ್ಡಮತದಾನದ ಭೀತಿಯ ಹಿನ್ನೆಲೆಯಲ್ಲಿ ಪ್ರತಿಪಕ್ಷ ಎನ್‌ಡಿಎ ಶಾಸಕರನ್ನು ರಾಂಚಿಯ ಹೊಟೇಲೊಂದಕ್ಕೆ ಸ್ಥಳಾಂತರಿಸಲಾಗಿದೆಯೆಂದು ಪಕ್ಷದ ಮೂಲಗಳು ತಿಳಿಸಿವೆ.

ರಾಜ್ಯಸಭಾ ಚುನಾವಣೆಯ ಕುರಿತಾಗಿ ಕಾರ್ಯತಂತ್ರವೊಂದನ್ನು ರೂಪಿಸಲು ತಾವು ಹೋಟೆಲ್ ನಲ್ಲಿ ಸಭೆ ನಡೆಸುತ್ತಿರುವುದಾಗಿ ಜಾರ್ಖಂಡ್ ವಿಧಾನಸಭೆಯ ಪ್ರತಿಪಕ್ಷ ನಾಯಕ ಬಾಬುಲಾಲ್ ಮರಾಂಡಿ ತಿಳಿಸಿದ್ದಾರೆ.

ಹೊಟೇಲ್‌ನಲ್ಲಿ ಶಾಸಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಬಾಬುಆಲ್ ಮರಾಂಡಿ ಅವರು ತಿಳಿಸಿದ್ದಾರೆ.

ರಾಜ್ಯದ ಎರಡು ರಾಜ್ಯಸಭಾ ಸ್ಥಾನಗಳ ಪೈಕಿ ಒಂದರಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನಾಥ್ವಾನಿ ಅವರ ಜಯಗಳಿಸುವ ಬಗ್ಗೆ ಮರಾಂಡಿ ಅವು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಬೇಕಾದರೆ ಅಭ್ಯರ್ಥಿಯು ಕನಿಷ್ಠ 28 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದಿರಬೇಕಾಗುತ್ತದೆ. ಚುನಾವಣೆಯಲ್ಲಿ ಪರಿಮಳ್ ನಾಥಾನಿ ಅವರು ಜಯಗಳಿಸಲು ಬೇಕಾದಷ್ಟು ಶಾಸಕರ ಸಂಖ್ಯೆಯನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟವು ಜಾರ್ಖಂಡ್ ವಿಧಾನಸಭೆಯಲ್ಲಿ ಹೊಂದಿಲ್ಲ. ಅಡ್ಡಮತದಾನ ನಡೆದಲ್ಲಿ ಮಾತ್ರ ಅವರು ಜಯಗಳಿಸಬಹುದೆಂದು ಬಿಜೆಪಿ ಶಾಸಕರೊಬ್ಬರು ತಿಳಿಸಿದ್ದಾರೆ.

ಜಾರ್ಖಂಡ್ ವಿಧಾನಸಭೆಯಲ್ಲಿ ಜೆಎಂಎಂನ 34, ಕಾಂಗ್ರೆಸ್‌ನ 16 ಹಾಗೂ ಆರ್ಜೆಡಿಯ ನಾಲ್ವರು ಹಾಗೂ ಸಿಪಿಐ (ಎಂಎಲ್)ಲಿಬರೇಶನ್‌ನ ಇಬ್ಬರು ಸೇರಿದಂತೆ ಇಂಡಿಯಾ ಮೈತ್ರಿಕೂಟವು 56 ಶಾಸಕರನ್ನು ಹೊಂದಿದೆ.

ಎನ್‌ಡಿಎ ಮೈತ್ರಿಕೂಟವು 24 ಶಾಸಕರನ್ನು ಹೊಂದಿದ್ದು, ಬಿಜೆಪಿಯ 21 ಮಂದಿ ಹಾಗೂ ಎಲ್ಜೆಪಿ (ರಾಮ್ವಿಲಾಸ್ ಪಾಸ್ವಾನ್), ಎಜೆಎಸ್ಯು ಪಾರ್ಟಿ ಮತ್ತು ಜೆಡಿ (ಯು)ನ ತಲಾ ಓರ್ವ ಶಾಸಕರಿದ್ದಾರೆ.

ಜೆಎಂಎಂ ಸಂಸ್ಥಾಪಕ ಶಿಬು ಸೊರೇನ್ ಅವರ ನಿಧನ ಬಳಿಕ ಜಾರ್ಖಂಡ್‌ನಲ್ಲಿ ರಾಜ್ಯಸಭಾದ ಒಂದು ಸ್ಥಾನದ ಖಾಲಿ ಬಿದ್ದಿದೆ ಹಾಗೂ ಬಿಜೆಪಿಯ ರಾಜ್ಯಸಭಾ ಸಂಸದ ದೀಪಕ್ ಪ್ರಕಾಶ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯು ಜೂನ್ 21ರಂದು ಮುಕ್ತಾಯಗೊಳ್ಳಲಿದ್ದು, ಈ ಎರಡೂ ಸ್ಥಾನಗಳಿಗೂ ಚುನಾವಣೆ ನಡೆಯುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries