HEALTH TIPS

Manipur | ಪೆಟ್ರೋಲ್‌ಗೆ 230 ರೂ, LPG ಸಿಲಿಂಡರ್ ಬೆಲೆ 5,000 ರೂ: ಕಾಂಗ್‌ಪೋಕ್ಪಿಯಲ್ಲಿ ನಾಗಾ ದಿಗ್ಬಂಧನದಲ್ಲಿ ಸಿಲುಕಿದ ಕುಕಿಗಳು

 ಕಾಂಗ್ಪೋರಿ: ಮಣಿಪುರದ ಕುಕಿ ಪ್ರಾಬಲ್ಯದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ನಾಗಾ ಸಂಘಟನೆಗಳು ಹೇರಿರುವ ʼಆರ್ಥಿಕ ದಿಗ್ಬಂಧನʼ ದಿಂದ ಅಗತ್ಯ ವಸ್ತುಗಳ ಸರಬರಾಜು ತೀವ್ರವಾಗಿ ವ್ಯತ್ಯಯಗೊಂಡಿದ್ದು, ಪೆಟ್ರೋಲ್ ಬೆಲೆ ಲೀಟರ್‌ಗೆ 230 ಹಾಗೂ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ 5,000ಕ್ಕೆ ಏರಿಕೆಯಾಗಿದೆ. 


ನಾಗಾಗಳ ಉನ್ನತ ಸಂಸ್ಥೆಯಾದ ಯುನೈಟೆಡ್ ನಾಗಾ ಕೌನ್ಸಿಲ್ (Uಓಅ) ಮೇ 17ರಿಂದ ಅಂತರ-ಜಿಲ್ಲಾ "ಆರ್ಥಿಕ ದಿಗ್ಬಂಧನ"ವನ್ನು ಹೇರಿದ್ದು , ಜಿಲ್ಲೆಯಲ್ಲಿ ಜನರ ದೈನಂದಿನ ಬದುಕು ದುಸ್ತರಗೊಳಿಸಿದೆ.

ನಾಗಾ ಪ್ರಾಬಲ್ಯದ ಸೇನಾಪತಿ ಜಿಲ್ಲೆಯ ಎನ್‌ಎಚ್-02 ರಸ್ತೆಯು ಕಾಂಗ್ಪೋಕ್ಪಿಯ ಗಡಿಯನ್ನು ಹಂಚಿಕೊಂಡಿದೆ. ಈ ರಸ್ತೆಯಲ್ಲಿ ಇಂಧನ ಮತ್ತು ಆಹಾರ ಪದಾರ್ಥಗಳನ್ನು ಹೊತ್ತೊಯ್ಯುವ ಟ್ರಕ್‌ಗಳು ಸಾಲುಗಟ್ಟಿ ನಿಂತಿವೆ.

ಪೆಟ್ರೋಲ್ ಬೆಲೆ 350 ರೂ.ವರೆಗೆ ತಲುಪಿದೆ ಮತ್ತು ಎಲ್‌ಪಿಜಿ ಸಿಲಿಂಡರ್ 5,000 ರೂಪಾಯಿಗೆ ಮಾರಾಟವಾಗುತ್ತಿದೆ. 50 ಕೆಜಿ ಅಕ್ಕಿಯ ಚೀಲದ ಬೆಲೆ ಹಿಂದೆ 1,700 ರೂಪಾಯಿಯಿದ್ದು, ಈಗ 3,000 ರೂ.ಗೆ ಏರಿಕೆಯಾಗಿದೆ ಎಂದು ಸ್ಥಳೀಯರು ತಿಳಿಸಿರುವ ಬಗ್ಗೆ ಜeಛಿಛಿಚಿಟಿheಡಿಚಿಟಜ ವರದಿ ಮಾಡಿದೆ.

"ಇಂದು ಪೆಟ್ರೋಲ್ ಬೆಲೆ 230 ರೂಪಾಯಿ ಮತ್ತು ಡೀಸೆಲ್ 190 ರೂಪಾಯಿದೆ. ಅಂಗಡಿಗಳಲ್ಲಿ ದಾಸ್ತಾನು ಕಡಿಮೆಯಾಗುತ್ತಿದೆ. ಆಡಳಿತವು ದಿಗ್ಬಂಧನವನ್ನು ತೆರವುಗೊಳಿಸಲು ಮಧ್ಯಪ್ರವೇಶಿಸದಿದ್ದರೆ, ಕಾಂಗ್ಪೋಕ್ಪಿ ಶೀಘ್ರದಲ್ಲೇ ಆಹಾರದ ಕೊರತೆಯನ್ನು ಎದುರಿಸಲಿದೆ. ಅಡುಗೆ ಅನಿಲದ ಪೂರೈಕೆ ಇಲ್ಲದಿರುವುದರಿಂದ ಜನರು ಸೌದೆಯನ್ನು ಬಳಸುತ್ತಿದ್ದಾರೆ. ಅನೇಕ ಆಹಾರ ಕೇಂದ್ರಗಳು ಬಾಗಿಲು ಮುಚ್ಚಿವೆ" ಎಂದು ವ್ಯಕ್ತಿಯಬ್ಬರು ಹೇಳಿದ್ದಾರೆ.

2023ರಿಂದ ಕಾಂಗ್ಪೋಕ್ಪಿ ಪಟ್ಟಣದ ಹೊರವಲಯದಲ್ಲಿರುವ ಎಲ್. ಸಾಂಗ್ಟನ್‌ನಲ್ಲಿನ ಪರಿಹಾರ ಶಿಬಿರದಲ್ಲಿ ಆಶ್ರಯ ಪಡೆದಿರುವ ಇಂಫಾಲ್ ಮತ್ತು ಇತರ ಕಡೆಗಳಿಂದ ಸ್ಥಳಾಂತರಗೊಂಡ ಕುಕಿಗಳು ಅಡುಗೆಗಾಗಿ ಕಲ್ಲಿದ್ದಲು ಮತ್ತು ಸೌದೆಯನ್ನು ಬಳಸುತ್ತಿದ್ದಾರೆ. ಕಾಂಗ್ಪೋಕ್ಪಿಗೆ ಪರ್ಯಾಯ ಮಾರ್ಗವಿಲ್ಲದಿರುವುದರಿಂದ ಜೀವನವು ಹದಗೆಡುತ್ತಿದೆ. ದಿಗ್ಬಂಧನವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಕೋರಿ ಮೇ 17 ರಿಂದ ನಾವು ಮೂರು ಬಾರಿ ಉಪ ಆಯುಕ್ತರನ್ನು ಭೇಟಿಯಾಗಿದ್ದೇವೆ ಎಂದು ಕುಕಿ ಸಮುದಾಯದ ಹಾವೊಕಿಪ್ ಹೇಳಿದರು.

ಕುಕಿಗಳು ಆರು ನಾಗಾಗಳನ್ನು ಬಿಡುಗಡೆ ಮಾಡಿದ್ದರೆ ದಿಗ್ಬಂಧನವನ್ನು ತೆರವುಗೊಳಿಸಲಾಗುತ್ತಿತ್ತು ಎಂದು ನಾಗಾ ನಾಯಕರೊಬ್ಬರು ತಿಳಿಸಿದ್ದಾರೆ.

ಆರು ನಾಗಾಗಳ ಅಪಹರಣ ಮತ್ತು ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಸಶಸ್ತ್ರ ಗುಂಪು ಕುಕಿ ನ್ಯಾಷನಲ್ ಫ್ರಂಟ್ ನ ಅಧ್ಯಕ್ಷ ಸೇರಿ ಎಲ್ಲಾ ಸದಸ್ಯರನ್ನು ತಕ್ಷಣ ಬಂಧಿಸಬೇಕು. 18 ನಾಗಾಗಳನ್ನು ಅಪಹರಿಸಿದ ಕಾಂಗ್ಪೋಕ್ಪಿಯ ಲೀಲಾನ್ ವೈಫೈ ಗ್ರಾಮದ ಮುಖ್ಯಸ್ಥನನ್ನು ತಕ್ಷಣ ಬಂಧಿಸಬೇಕು. ಏಓಈ-Pಯನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು. ಕುಕಿ ಸಮುದಾಯದವರಾದ ಉಪ ಮುಖ್ಯಮಂತ್ರಿ ನೆಮ್ಚಾ ಕಿಪ್ಗೆನ್ ಅವರು ರಾಜೀನಾಮೆ ನೀಡಬೇಕು ಎಂದು ನಾಗಾ ಸಮುದಾಯ ಆಗ್ರಹಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries