ಇಂಫಾಲ: ಮೇ 13ರಂದು ಸಶಸ್ತ್ರ ಕುಕಿ ಗುಂಪುಗಳಿಂದ ಅಪಹರಿಸಲ್ಪಟ್ಟಿದ್ದಾರೆ ಎನ್ನಲಾದ ನಾಗಾ ಸಮುದಾಯದ ಆರು ಜನರ ಮೃತದೇಹ ಪತ್ತೆಯಾಗಿವೆ ಎಂದು ಮಣಿಪುರ ಪೊಲೀಸರು ಬುಧವಾರ ತಿಳಿಸಿದ್ದಾರೆ.
ಅಪಹರಣಕ್ಕೊಳಗಾಗಿದ್ದ 14 ಕುಕಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದೆ ಎದು ಯುನೈಟೆಡ್ ನಾಗಾ ಕೌನ್ಸಿಲ್ ದೃಢಪಡಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಮಣಿಪುರ ಪೊಲೀಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಅಸ್ಸಾಂ ರೈಫಲ್ಸ್‌ನ ಸುಮಾರು 450 ಸಿಬ್ಬಂದಿ ಶ್ವಾನ ದಳ ಹಾಗೂ ವಿಧಿ ವಿಜ್ಞಾನ ತಜ್ಞರ ತಂಡಗಳ ನೆರವಿನಿಂದ ನಡೆಸಿದ ಸುಮಾರು 24 ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ಬುಧವಾರ ಅಪರಾಹ್ನ 6 ನಾಗಾ ಪುರುಷರ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

