ಮುಂಬೈ: ಇಲ್ಲಿನ ಏಇಒ ಆಸ್ಪತ್ರೆಯಲ್ಲಿ ಒಃಃS ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸೇಜಲ್ ಪವಾರ್ ಅವರು ಕಾಮಿಡಿಯನ್ ಪ್ರಣಿತ್ ಮೋರ್ ಅವರ ಕಾರ್ಯಕ್ರಮದಲ್ಲಿ ಪುರುಷ ಮೃತದೇಹಗಳ ಜನನಾಂಗಗಳ ಗಾತ್ರದ ಕುರಿತು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣದ ಕುರಿತು ಆಸ್ಪತ್ರೆಯ ಆಡಳಿತ ಆಂತರಿಕ ತನಿಖೆಗೆ ಆದೇಶಿಸಿದೆ.
ಕಾರ್ಯಕ್ರಮದ ವೇಳೆ ಸೇಜಲ್ ನೀಡಿದ ಹೇಳಿಕೆಗಳ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವೈದ್ಯಕೀಯ ವಲಯ ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗಾಗಿ ದಾನ ಮಾಡಲಾಗುವ ಮೃತದೇಹಗಳ ಬಗ್ಗೆ ಅವಮಾನಕಾರಿಯಾಗಿ ಮಾತನಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಲಿಖಿತ ಕ್ಷಮೆಯಾಚನೆ:
ವಿವಾದದ ಬಳಿಕ ಸೇಜಲ್ ಪವಾರ್ ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ ಎಂದು Iಟಿಜiಚಿ ಖಿoಜಚಿಥಿ ವರದಿ ಮಾಡಿದೆ. ಆದರೂ, ಸಾರ್ವಜನಿಕ ವೇದಿಕೆಯಲ್ಲಿ ಅವರು ಮಾಡಿದ ಹೇಳಿಕೆಗಳು ಹಿರಿಯ ವೈದ್ಯರಲ್ಲಿ ಅಸಮಾಧಾನ ಉಂಟುಮಾಡಿವೆ ಎಂದು ಮೂಲಗಳು ತಿಳಿಸಿವೆ. ವೈದ್ಯಕೀಯ ಶಿಕ್ಷಣಕ್ಕಾಗಿ ದಾನವಾಗುವ ಮೃತದೇಹಗಳನ್ನು ಅತ್ಯಂತ ಗೌರವದಿಂದ ಪರಿಗಣಿಸಲಾಗುತ್ತದೆ ಮತ್ತು ಅಂತಹ ವಿಷಯಗಳ ಬಗ್ಗೆ ಹಗುರವಾಗಿ ಮಾತನಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆಂತರಿಕ ತನಿಖೆ ಆರಂಭ:
ಸೇಜಲ್ ಭಾಗವಹಿಸಿದ್ದ ಒಂದು ಗಂಟೆಯ ಕಾರ್ಯಕ್ರಮದ ಸಂಪೂರ್ಣ ವೀಡಿಯೋವನ್ನು ಪರಿಶೀಲಿಸಲಾಗುತ್ತಿದ್ದು, ಶುಕ್ರವಾರ ಸಂಜೆ ಅಥವಾ ಶನಿವಾರ ಬೆಳಿಗ್ಗೆ ಆಂತರಿಕ ವರದಿ ಸಲ್ಲಿಕೆಯಾಗುವ ನಿರೀಕ್ಷೆಯಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವುದು ಕೇವಲ ಎರಡು ನಿಮಿಷಗಳ ವೀಡಿಯೋ ತುಣುಕಷ್ಟೇ ಆಗಿರುವುದರಿಂದ, ಸಂಪೂರ್ಣ ಸಂದರ್ಭವನ್ನು ಪರಿಗಣಿಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

