HEALTH TIPS

ನೀಟ್ ಮರುಪರೀಕ್ಷೆ: ವಿದ್ಯಾರ್ಥಿಗಳಿಗೆ ಸಲಹೆ, ಪ್ರವೇಶ ಪತ್ರ ಅಪ್‌ಡೇಟ್ ಹಂಚಿದ NTA

ನವದೆಹಲಿ: ನಾಳೆ (ಜೂನ್ 21ರಂದು) ನಡೆಯಲಿರುವ 2026ರ ನೀಟ್‌-ಯುಜಿ ಮರುಪರೀಕ್ಷೆಗೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವಂತೆ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಸೂಚಿಸಿದೆ. ಈ ಸಂದರ್ಭದಲ್ಲಿ ಏಜೆನ್ಸಿಯ ಅಧಿಕೃತ ವೆಬ್‌ಸೈಟ್‌ ಮಾತ್ರ ಪರಿಶೀಲಿಸುವಂತೆಯೂ ವಿದ್ಯಾರ್ಥಿಗಳಿಗೆ ಸುರಕ್ಷತಾ ಸಲಹೆಯನ್ನು ನೀಡಿದೆ.

ನೀಟ್ ಪ್ರವೇಶ ಪತ್ರಕ್ಕೆ ಸಂಬಂಧಿಸಿದ ರಿಮೈಂಡರ್ ಹಾಗೂ ಸುರಕ್ಷತಾ ಸಲಹೆ ಹೀಗಿದೆ:

*ಜೂನ್ 21ರ ಮರುಪರೀಕ್ಷೆಗಾಗಿ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದಕ್ಕಾಗಿ ಎನ್‌ಟಿಎ, ಅಭ್ಯರ್ಥಿಗಳಿಗೆ SMS ಹಾಗೂ ಇಮೇಲ್ ಮೂಲಕ ರಿಮೈಂಡರ್‌ಗಳನ್ನು ಕಳುಹಿಸುತ್ತಿದೆ.

ಎನ್‌ಟಿಎ ಮೆಸೇಜ್ ನೈಜವೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ?

  • SMS: NICPEP ಕಡೆಯಿಂದ ಮಾತ್ರ ಅಧಿಕೃತವಾಗಿ ಬರುತ್ತದೆ.

  • Email: no-reply.neet.nta@nic.in

  • https://neet.nta.nic.in : (ಬ್ರೌಸರ್‌ನಲ್ಲಿ ನೀವೇ ಟೈಪ್ ಮಾಡಿ)

  • ಎನ್‌ಟಿಎ ಅಭ್ಯರ್ಥಿಗಳ ಬಳಿ ಹಣ ಕೇಳುವುದಿಲ್ಲ.

  • ಪರೀಕ್ಷಾ ಪತ್ರಿಕೆ, ಉತ್ತರ ಅಥವಾ ಸೋರಿಕೆಯಾದ ಮಾಹಿತಿಗಳನ್ನು ಎಂದಿಗೂ ರವಾನಿಸುವುದಿಲ್ಲ.

  • ಲಿಂಕ್ ಮೂಲಕ ನಿಮ್ಮ ಪ್ರವೇಶ ಪತ್ರ ಹಂಚಿಕೊಳ್ಳಲು ಕೇಳುವುದಿಲ್ಲ.

  • ನಿಮಗೇನಾದರೂ ಅಂತಹ ಸಂದೇಶಗಳು ಬಂದ್ದಲ್ಲಿ ಲಿಂಕ್ ಕ್ಲಿಕ್ ಮಾಡದಿರಿ. ತಕ್ಷಣವೇ ರಿಪೋರ್ಟ್ ಮಾಡಿ. ಎಚ್ಚರದಿಂದಿರಿ, ಸುರಕ್ಷಿತವಾಗಿರಿ ಎಂದಿದೆ.

ಇಲ್ಲಿ ದೂರು ದಾಖಲಿಸಿ:https://innovateindia.mygov.in/neet-ug-2026 ಅಥವಾ ಕರೆ ಮಾಡಿ 1930 / https://cybercrime.gov.in

ಅಧಿಕೃತ ವಾಟ್ಸ್‌ಆಯಪ್ ಅಪ್‌ಡೇಟ್:

*ಮರುಪರೀಕ್ಷೆಯ ಮಾಹಿತಿ, ಪರೀಕ್ಷಾ ಕೇಂದ್ರ ಮಾಹಿತಿಗಳನ್ನು ವಾಟ್ಸ್‌ಆಯಪ್ ಮೂಲಕ ಅಭ್ಯರ್ಥಿಗಳಿಗೆ ರವಾನಿಸಲಾಗುತ್ತದೆ.

ಅಧಿಕೃತ ಸಂದೇಶ ಎಂದು ತಿಳಿಯುವುದು ಹೇಗೆ:

  • ಅಧಿಕೃತ ವಾಟ್ಸ್‌ಆಯಪ್ ನಂಬರ್: +91 78279 80287

  • National Testing Agency ಎಂಬ ಬ್ಲೂ ಟಿಕ್ ಗುರುತಿಸಿ. ಬ್ಲೂ ಟಿಕ್ ಇಲ್ಲದಿದ್ದರೆ ಅದು ಎನ್‌ಟಿಎ ಅಲ್ಲ.

  • ಇದು ಬ್ರಾಡ್‌ಕಾಸ್ಟ್ ಚಾನಲ್ ಆಗಿದ್ದು, ನಿಮ್ಮ ರಿಪ್ಲೇ, ಒಟಿಪಿ, ವೈಯಕ್ತಿಕ ವಿವರ ಅಥವಾ ಹಣ ಪಾವತಿ ಕೇಳುವುದಿಲ್ಲ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಎಲ್ಲಿ:

https://neet.nta.nic.in ಮೂಲಕ ಡೌನ್‌ಲೋಡ್ ಮಾಡಿ. (ಫಾರ್ವರ್ಡ್ ಲಿಂಕ್‌ಗಳನ್ನು ನಂಬದಿರಿ. ನೀವೇ ಬ್ರೌಸರ್‌ನಲ್ಲಿ ಟೈಪ್ ಮಾಡಿ ಓಪನ್ ಮಾಡಿ). ಮೇ 3ರ ಪ್ರವೇಶ ಪತ್ರ ಮಾನ್ಯವಾಗಿರುವುದಿಲ್ಲ.

ಜೂನ್ 21ರ ಪ್ರವೇಶ ಪತ್ರವನ್ನು ಈಗಾಗಲೇ ಡೌನ್‌ಲೋಡ್ ಮಾಡಿರುವರು ಮತ್ತೆ ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries