HEALTH TIPS

ಭಯೋತ್ಪಾದಕರಿಗೆ Telegram ಆದ್ಯತೆಯ ಪ್ಲಾಟ್‌ಫಾರ್ಮ್; 'ಹೊಸ ಡಾರ್ಕ್ ವೆಬ್‌' ಆಗಿ ಮಾರ್ಪಟ್ಟಿದೆ: ದೆಹಲಿ ಹೈಕೋರ್ಟ್‌ಗೆ ತಿಳಿಸಿದ ಕೇಂದ್ರ

ನವದೆಹಲಿ: ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಟೆಲಿಗ್ರಾಮ್‌ ಭಯೋತ್ಪಾದಕರು, ಸೈಬರ್ ವಂಚಕರು, ಮಾದಕವಸ್ತು ಕಳ್ಳಸಾಗಣೆ ಜಾಲಗಳು ಮತ್ತು ಇತರ ಅಪರಾಧಿಗಳ ಪ್ರಮುಖ ಸಂಪರ್ಕ ವೇದಿಕೆಯಾಗಿ ಪರಿಣಮಿಸಿದ್ದು, ಅದು 'ಹೊಸ ಡಾರ್ಕ್ ವೆಬ್‌' ಆಗಿ ಮಾರ್ಪಟ್ಟಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಟೆಲಿಗ್ರಾಮ್ ಮೇಲಿನ ತಾತ್ಕಾಲಿಕ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು, ರಾಷ್ಟ್ರೀಯ ಭದ್ರತೆ, ಸೈಬರ್ ಅಪರಾಧ ನಿಯಂತ್ರಣ ಮತ್ತು ಕಾನೂನು ಜಾರಿ ಸಂಸ್ಥೆಗಳ ಕಾರ್ಯಾಚರಣೆಗೆ ಟೆಲಿಗ್ರಾಮ್ ಗಂಭೀರ ಸವಾಲುಗಳನ್ನು ಸೃಷ್ಟಿಸುತ್ತಿದೆ ಎಂದು ವಾದಿಸಿದೆ.

NEET ಪ್ರಶ್ನೆಪತ್ರಿಕೆ ಸೋರಿಕೆ, ಸೈಬರ್ ವಂಚನೆ, ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ವಿಷಯಗಳ ಪ್ರಸಾರ, ಮಾದಕವಸ್ತು ಕಳ್ಳಸಾಗಣೆ, ಆರ್ಥಿಕ ಅಪರಾಧಗಳು ಹಾಗೂ ಭಯೋತ್ಪಾದನೆಗೆ ಸಂಬಂಧಿಸಿದ ಪ್ರಚಾರ ಚಟುವಟಿಕೆಗಳಿಗೆ ಟೆಲಿಗ್ರಾಮ್ ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಕೇಂದ್ರ ಆರೋಪಿಸಿದೆ.

'ಟೆಲಿಗ್ರಾಮ್ ಹೊಸ ಡಾರ್ಕ್ ವೆಬ್‌ನಂತೆ ಕಾರ್ಯನಿರ್ವಹಿಸುತ್ತಿದೆ. ಅಪರಾಧಿಗಳು ಮತ್ತು ಸೈಬರ್ ವಂಚಕರು ಡಾರ್ಕ್ ವೆಬ್‌ಗೆ ಸಂಪರ್ಕ ಕಲ್ಪಿಸುವ ಲಿಂಕ್‌ಗಳನ್ನು ಟೆಲಿಗ್ರಾಮ್‌ ಚಾನೆಲ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಚಟುವಟಿಕೆಗಳನ್ನು ಪತ್ತೆಹಚ್ಚುವುದು ಕಾನೂನು ಜಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ ಎಂದು ಕೇಂದ್ರ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಟೆಲಿಗ್ರಾಮ್‌ನ ಗೌಪ್ಯತೆ ಮತ್ತು ಅನಾಮಧೇಯತೆ ಸೌಲಭ್ಯಗಳಿಂದಾಗಿ ಬಳಕೆದಾರರು ತಮ್ಮ ಫೋನ್ ಸಂಖ್ಯೆ ಹಾಗೂ ಗುರುತುಗಳನ್ನು ಮರೆಮಾಚಿಕೊಳ್ಳಬಹುದು. ಇದರಿಂದ ಖಾತೆಗಳ ಹಿಂದಿರುವ ವ್ಯಕ್ತಿಗಳನ್ನು ಗುರುತಿಸುವುದು ತನಿಖಾ ಸಂಸ್ಥೆಗಳಿಗೆ ಕಷ್ಟಕರವಾಗಿದೆ ಎಂದು ಕೇಂದ್ರ ತಿಳಿಸಿದೆ.

ಟೆಲಿಗ್ರಾಮ್‌ನ ಕೆಲವು ತಾಂತ್ರಿಕ ವೈಶಿಷ್ಟ್ಯಗಳು ಅದರ ದುರುಪಯೋಗವನ್ನು ತಡೆಯುವುದನ್ನು ಕಷ್ಟಕರವಾಗಿಸಿವೆ ಎಂದು ಐ4ಸಿ ವರದಿಗಳು ಸೂಚಿಸಿವೆ ಎಂದು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.

ವಾಟ್ಸಾಪ್‌ನಂತಹ ಇತರ ವೇದಿಕೆಗಳಿಗಿಂತ ಭಿನ್ನವಾಗಿ, ಟೆಲಿಗ್ರಾಮ್‌ನಲ್ಲಿ ಒಬ್ಬ ಬಳಕೆದಾರ ಹಲವಾರು ಸ್ವಯಂಚಾಲಿತ ಖಾತೆಗಳನ್ನು (ಬಾಟ್‌ಗಳು) ರಚಿಸಬಹುದಾಗಿದೆ. ಒಂದು ಖಾತೆಯನ್ನು ಬಂದ್ ಮಾಡಿದರೂ ಅದೇ ಮಾದರಿಯ ಹೊಸ ಖಾತೆಗಳು ತ್ವರಿತವಾಗಿ ಸೃಷ್ಟಿಯಾಗುವುದರಿಂದ ದುರುಪಯೋಗವನ್ನು ನಿಯಂತ್ರಿಸುವುದು ಕಷ್ಟವಾಗುತ್ತಿದೆ ಎಂದು ತುಷಾರ್ ಮೆಹ್ತಾ ತಿಳಿಸಿದರು.

ಭಯೋತ್ಪಾದಕ ಸಂಘಟನೆಗಳು ಮತ್ತು ತೀವ್ರಗಾಮಿ ಗುಂಪುಗಳು ಟೆಲಿಗ್ರಾಮ್‌ ಗುಂಪುಗಳು ಹಾಗೂ ಚಾನೆಲ್‌ಗಳ ಮೂಲಕ ತಮ್ಮ ಚಟುವಟಿಕೆಗಳನ್ನು ಪ್ರಚಾರ ಮಾಡುತ್ತಿವೆ. ತಪ್ಪು ಮಾಹಿತಿ ಹರಡಿ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನಗಳೂ ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.

ಸೈಬರ್ ವಂಚನೆ, ಅಕ್ರಮ ಹಣ ವರ್ಗಾವಣೆಗೆ ಬಳಸುವ ಬ್ಯಾಂಕ್ ಖಾತೆ(ಮ್ಯೂಲ್)ಗಳ ಖರೀದಿ-ಮಾರಾಟ, ಕಳ್ಳತನ ಮಾಡಿದ ಮಾಹಿತಿಯ ಹಂಚಿಕೆ ಹಾಗೂ ದುರುದ್ದೇಶಪೂರಿತ ತಂತ್ರಾಂಶಗಳ ಪ್ರಸಾರಕ್ಕೂ ಟೆಲಿಗ್ರಾಮ್ ಬಳಸಲಾಗುತ್ತಿದೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಪೈರೇಟೆಡ್ ಚಲನಚಿತ್ರಗಳು, ವೆಬ್ ಸರಣಿಗಳು ಹಾಗೂ ಇತರ ಹಕ್ಕುಸ್ವಾಮ್ಯ ಹೊಂದಿದ ವಿಷಯಗಳ ಅಕ್ರಮ ಪ್ರಸಾರಕ್ಕೂ ಟೆಲಿಗ್ರಾಮ್ ಪ್ರಮುಖ ವೇದಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries