ಕೇಂದ್ರ ಸರ್ಕಾರವು 7 ಕೋಟಿಗೂ ಅಧಿಕ ಇಪಿಎಫ್ ಚಂದಾದಾರರ ಖಾತೆಗಳಿಗೆ ಈ ತಿಂಗಳಲ್ಲೇ ಪರಿಷ್ಕೃತ ಬಡ್ಡಿದರವನ್ನು ಜಮೆ ಮಾಡುವ ನಿರೀಕ್ಷೆಯಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಯ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಚಂದಾದಾರರಿಗೆ ಶೇ.8.25 ಬಡ್ಡಿದರ ನಿಗದಿಪಡಿಸಿರುವುದಕ್ಕೆ ಕೇಂದ್ರ ವಿತ್ತ ಸಚಿವಾಲಯವು ತನ್ನ ಅನುಮೋದನೆ ನೀಡಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
2026ರ ಮಾರ್ಚ್ 2ರಂದು ಕೇಂದ್ರ ಕಾನೂನು ಸಚಿವ ಮನ್‌ಸುಖ್ ಮಾಂಡವೀಯ ನೇತೃತ್ವದಲ್ಲಿ ನಡೆದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ ಸಭೆಯು 2025-26ನೇ ಸಾಲಿಗೆ ಶೇ.8.25 ಬಡ್ಡಿದರವನ್ನು ನಿಗದಿಪಡಿಸುವ ಮೂಲಕ ಸತತ ಮೂರನೇ ವರ್ಷವೂ ಬಡ್ಡಿದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡು ಬಂದಿದೆ.
ಇಪಿಎಫ್‌ಒ ಕಾರ್ಯಾಲಯವು ಅಭಿವೃದ್ಧಿಪಡಿಸಿದ ನೂತನ ವ್ಯವಸ್ಥೆಯಡಿ ಇಪಿಎಫ್ ಬಡ್ಡಿದರವನ್ನು ಚಂದಾದಾರರ ಖಾತೆಗಳಿಗೆ ತಕ್ಷಣವೇ ವರ್ಗಾಯಿಸಲಾಗುತ್ತದೆ.

