ಉಪ್ಪಳ: ಆಪರೇಷನ್ ತೂಫಾನ್ ಯೋಜನೆಯನ್ವಯ ಮಂಜೇಶ್ವರ ಠಾಣೆ ಪೆÇಲೀಸರು ಉಪ್ಪಳದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ 10.200 ಗ್ರಾಂ ಎಂಡಿಎಂಎ ವಶಪಡಿಸಿಕೊಂಡು, ಯುವಕನನ್ನು ಬಂಧಿಸಿದ್ದಾರೆ. ಉಪ್ಪಳ ಹೀರೋ ಕಾಂಪ್ಲೆಕ್ಸ್‍ನ ತಙಳ್ ಹೌಸ್‍ನ ಜುನೈದ್ ಯಾನೆ ಸೈಯದ್ ಜೌಹರ್ (29)ಬಂಧಿತ. ಉಪ್ಪಳ ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಪೆÇಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಮಾದಕವಸ್ತು ಸಾಗಾಟದ ಮಧ್ಯೆ ಕಾರ್ಯಾಚರಣೆ ನಡೆಸಲಾಗಿದೆ.
ಠಾಣೆ ಎಸ್.ಐ ವಿಷ್ಣು ಎಸ್.ನಾಯರ್ ನೇತೃತ್ವದ ಪೆÇಲೀಸರ ತಂಡ ಗಸ್ತು ನಡೆಸುತ್ತಿದ್ದ ವೇಳೆ ಸಂಶಯಾಸ್ಪದ ರೀತಿಯಲ್ಲಿ ಸುತ್ತಡುತ್ತಿದ್ದ ಸೈಯದ್ ಜೌಹರ್‍ನನ್ನು ತಪಾಸಣೆ ನಡೆಸಿದಾಗ ಆತನ ಪ್ಯಾಂಟ್ ಜೇಬಿನಲ್ಲಿ ಎಂಡಿಎಂಎ ಪತ್ತೆಯಾಗಿದೆ.


