ಮಂಜೇಶ್ವರ: ವರ್ಕಾಡಿ ನೀರೊಳಿಕೆಯಲ್ಲಿ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಬಸ್ ಚಾಲಕ ಮೃತಪಟ್ಟಿದ್ದಾರೆ. ಮಂಗಳೂರು ಕುಲಶೇಖರ ಕಕ್ಕೆಬೆಟ್ಟು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವ ಡಿ. ಕೃಷ್ಣ ನಾಯ್ಕ ಎಂಬವರ ಪುತ್ರ ಅವಿನಾಶ್ ನಾಯಕ್ (32) ಮೃತಪಟ್ಟ ಯುವಕ.
ಮಂಗಳೂರು-ಬೆಳಗಾವಿ ರೂಟಲ್ಲಿ ಸಂಚರಿಸುವ ಖಾಸಗಿ ಬಸ್ ಚಾಲಕರಾಗಿದ್ದರು. ವರ್ಕಾಡಿ ನೀರೊಳಿಕೆಯಲ್ಲಿರುವ ಪತ್ನಿ ಮನೆಗೆ ಜೂನ್ 14ರಂದು ತೆರಳಿದ್ದ ಇವರು, ಆಂದು ಮಧ್ಯಾಹ್ನ ಅಲ್ಲಿ ಹಲಸಿನ ಕಾಯಿ ಕೊಯ್ಯಲೆಂದು ಮರವೇರಿದ್ದ ಸಂದರ್ಭ ಆಯತಪ್ಪಿ ಬಿದ್ದಿದ್ದರು. ಗಂಭೀರ ಗಾಯಗೊಂಡಿದ್ದ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.


