HEALTH TIPS

ಜುಲೈ 11ಕ್ಕೆ 'ಮಹೇಂದ್ರಗಿರಿ' ಯುದ್ಧನೌಕೆ ಲೋಕಾರ್ಪಣೆ

ನವದೆಹಲಿ: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಭಾರತದಲ್ಲಿಯೇ ನಿರ್ಮಾಣಗೊಂಡ 'ಮಹೇಂದ್ರಗಿರಿ' ಯುದ್ಧನೌಕೆಯು ಇದೇ ಜುಲೈ 11ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಭಾರತೀಯ ನೌಕಾಪಡೆಯ ವಾರ್‌ಶಿಪ್‌ ಡಿಸೈನ್‌ ಬ್ಯೂರೊ ಈ ಯುದ್ಧನೌಕೆಯ ವಿನ್ಯಾಸ ಮಾಡಿದ್ದು, ಮುಂಬೈನ 'ಮಜಗಾಂವ ಡಾಕ್‌ ಶಿಪ್‌ಬಿಲ್ಡರ್ಸ್‌ ಲಿಮಿಟೆಡ್‌' (ಎಂಡಿಎಲ್‌) ಸಂಸ್ಥೆ ಇದನ್ನು ನಿರ್ಮಿಸಿದೆ.

'ಪ್ರಾಜೆಸ್ಟ್‌ 17ಎ' ಯೋಜನೆ ಅಡಿ ನಿರ್ಮಾಣಗೊಂಡ ಆರನೇ ಯುದ್ಧನೌಕೆ ಇದಾಗಿದೆ

ವೈಶಿಷ್ಟ್ಯಗಳೇನು?

* ಪ್ರಾಜೆಕ್ಟ್‌ 17ರ ಹೋಲಿಕೆಯಲ್ಲಿ ಪ್ರಾಜೆಕ್ಟ್‌ 17ಎ ಅಡಿಯಲ್ಲಿ ನಿರ್ಮಾಣಗೊಂಡ ಈ ಯುದ್ಧನೌಕೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಜೊತೆಗೆ, ಅತ್ಯಾಧುನಿಕವಾದ ಸೆನ್ಸರ್‌ ಕಣ್ಗಾವಲು ವ್ಯವಸ್ಥೆ ಇದೆ

* ವಾಯು ದಾಳಿ, ನೆಲಮಟ್ಟದಿಂದ ನಡೆಸಲಾಗುವ ದಾಳಿಗಳಿಗೆ ಮತ್ತು ಜಲಾಂತರ್ಗಾಮಿಗಳಿಗೆ ಸಶಕ್ತವಾಗಿ ತಡೆಯೊಡ್ಡಬಲ್ಲ ಸಾಮರ್ಥ್ಯವಿದೆ. ನೌಕೆಯಿಂದ ಭೂಮಿಗೆ ಚಿಮ್ಮುವ ಮತ್ತು ಆಕಾಶಕ್ಕೆ ಹಾರುವ ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಈ ಯುದ್ಧನೌಕೆ ಹೊಂದಿದೆ.

* ಡೀಸೆಲ್‌ ಮತ್ತು ಅನಿಲ- ಎರಡೂ ಇಂಧನ ವ್ಯವಸ್ಥೆಯಿಂದ ಚಲಿಸುವ ನೌಕೆ ಇದಾಗಿದೆ. ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯವೂ ಈ ನೌಕೆಗೆ ಇದೆ

* ಅತ್ಯಂತ ದೀರ್ಘಕಾಲದವರೆಗೂ ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವಿದೆ. ವಿಪತ್ತಿನ ಸಂದರ್ಭಗಳಲ್ಲಿ ಮಾನವೀಯ ಸಹಕಾರ ನೀಡಲೂ ಈ ಯುದ್ಧನೌಕೆ ಸಮರ್ಥವಾಗಿದೆ

ಭಾರತೀಯ ನೌಕಾಪಡೆಮಹೇಂದ್ರಗಿರಿಯು ಭಾರತೀಯ ನೌಕಾ ಪಡೆಯ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ದೇಶದ ಕಡಲು ಕಣ್ಗಾವಲು ವ್ಯವಸ್ಥೆಗೂ ಹೆಚ್ಚಿನ ಬಲ ತುಂಬಲಿದೆ. ಹಿಂದೂ ಮಹಾಸಾಗರ-ಪೆಸಿಫಿಕ್‌ ಸಮುದ್ರದಲ್ಲಿ ಸ್ಥಿರತೆ ಸಾಧಿಸಲು ನೆರವಾಗಲಿದೆ.

'ಶೇ 75 ಭಾರತದಲ್ಲಿ ನಿರ್ಮಾಣ'

'ಮಹೇಂದ್ರಗಿರಿ' ಯುದ್ಧನೌಕೆಯು ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಗೆ ಉತ್ತಮ ಉದಾಹರಣೆಯಾಗಿದೆ. ಈ ಯುದ್ಧನೌಕೆಯ ಶೇ 75ರಷ್ಟು ಭಾರತದಲ್ಲಿಯೇ ನಿರ್ಮಾಣವಾಗಿದೆ. ಭಾರತದ ಸುಮಾರು 200 ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಸುಮಾರು 4 ಸಾವಿರ ಸಿಬ್ಬಂದಿ ನೇರವಾಗಿ ಮತ್ತು 10 ಸಾವಿರ ಸಿಬ್ಬಂದಿ ಪರೋಕ್ಷವಾಗಿ ಈ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡಿದ್ದಾರೆ. ಪಶ್ಚಿಮ ಘಟ್ಟದ ಮಹೇಂದ್ರಗಿರಿ ಪರ್ವತ ಶ್ರೇಣಿ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ' ಎಂದು ನೌಕಾ ಪಡೆ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries