HEALTH TIPS

ರೈಲ್ವೆ: ಪ್ರತಿ ನಿಮಿಷಕ್ಕೆ 1.25 ಲಕ್ಷ ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ

ನವದೆಹಲಿ: ಭಾರತೀಯ ರೈಲ್ವೆಯು ಪ್ರಯಾಣಿಕರ ಟಿಕೆಟ್‌ ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ನವೀಕರಿಸಿದ್ದು, ಪರಿಷ್ಕೃತ ಸೌಲಭ್ಯವು ಪ್ರತಿ ನಿಮಿಷಕ್ಕೆ 1.25 ಲಕ್ಷ ಟಿಕೆಟ್‌ಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ. ಸದ್ಯ ಜಾರಿಯಲ್ಲಿರುವ ಸೌಲಭ್ಯದಡಿ ಪ್ರತಿ ನಿಮಿಷಕ್ಕೆ 25 ಸಾವಿರ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.

ಈ ಸಾಮರ್ಥ್ಯವನ್ನು ಐದು ಪಟ್ಟು ಹೆಚ್ಚಿಸಲಾಗಿದೆ.

'ತಾಂತ್ರಿಕ ಪರಿಷ್ಕರಣೆಯು ಟಿಕೆಟ್‌ ಕಾಯ್ದಿರಿಸುವಿಕೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದೆ' ಎಂದು ರೈಲ್ವೆ ಮಾಹಿತಿ ಕೇಂದ್ರ (ಸಿಆರ್‌ಐಎಸ್‌) ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್ವೆ ಸಚಿವಾಲಯದ ತಾಂತ್ರಿಕ ವಿಭಾಗವಾದ ಸಿಆರ್‌ಐಎಸ್‌ ಬುಧವಾರ ತನ್ನ 41ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಂಡಿತು. ಪ್ರಯಾಣಿಕರ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ, ಸರಕು ಕಾರ್ಯಾಚರಣೆ ವ್ಯವಸ್ಥೆ, ರಾಷ್ಟ್ರೀಯ ರೈಲು ವಿಚಾರಣಾ ವ್ಯವಸ್ಥೆ ಸೇರಿದಂತೆ ಕಳೆದ ನಾಲ್ಕು ದಶಕಗಳಲ್ಲಿ ಸಿಆರ್‌ಐಎಸ್‌ ಹಲವು ಪ್ರಯಾಣಿಕ ಸ್ನೇಹಿ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿದೆ.

'ರೈಲ್‌ ಒನ್‌' ಅಪ್ಲಿಕೇಷನ್‌ ಅನ್ನು ಇದುವರೆಗೆ 4.35 ಕೋಟಿ ಗ್ರಾಹಕರು ಡೌನ್‌ಲೋಡ್‌ ಮಾಡಿಕೊಂಡಿದ್ದು, ಪ್ರತಿದಿನ ಸರಾಸರಿ 10 ಲಕ್ಷದಷ್ಟು ಮಂದಿ ಈ ಅಪ್ಲಿಕೇಷನ್‌ ಬಳಸುತ್ತಾರೆ ಎಂದು ಸಿಆರ್‌ಐಎಸ್‌ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries