HEALTH TIPS

125ಕ್ಕೆ ಕುಸಿದ ಭಾರತದ ಪಾಸ್‌ಪೋರ್ಟ್‌ ರ್‍ಯಾಂಕಿಂಗ್: ನಮೀಬಿಯಾಗಿಂತ ಹಿಂದೆ

 ನವದೆಹಲಿ: 2026ರ ಪಾಸ್‌ಪೋರ್ಟ್ ರ್‍ಯಾಂಕಿಂಗ್‌ನಲ್ಲಿ ಭಾರತದ ಪಾಸ್‌ಪೋರ್ಟ್ ತೀವ್ರ ಕುಸಿತ ಕಂಡಿದೆ. ಜಾಗತಿಕ ಪಾಸ್‌ಪೋರ್ಟ್ ಸೂಚ್ಯಂಕದ(ಜಿಪಿಐ) 6ನೇ ಆವೃತ್ತಿಯಲ್ಲಿ 197 ದೇಶಗಳ ಪೈಕಿ ಭಾರತ 125ನೇ ಸ್ಥಾನಕ್ಕೆ ಕುಸಿದಿದೆ.

2021ರಿಂದ 2023ರವರೆಗೆ ಸತತ ಮೂರು ವರ್ಷ ಭಾರತ 127ನೇ ಸ್ಥಾನದಲ್ಲಿತ್ತು. 


ಕಳೆದ ವರ್ಷ 124ನೇ ಸ್ಥಾನಕ್ಕೆ ಏರುವ ಮೂಲಕ ಕೊಂಚ ಚೇತರಿಕೆ ಕಂಡಿತ್ತು. ಈ ವರ್ಷ ಮತ್ತೆ ಕುಸಿದಿದೆ.

ಗಮನಾರ್ಹ ಸಂಗತಿಯೆಂದರೆ, ವಿಶ್ವದ ಅತ್ಯಂತ ಬಡ ರಾಷ್ಟ್ರವಾದ ನಮೀಬಿಯಾ 124ನೇ ಸ್ಥಾನದಲ್ಲಿದ್ದು, ಭಾರತ ಅದಕ್ಕಿಂತ ಒಂದು ಸ್ಥಾನ ಕುಸಿದಿರುವುದು ಆತಂಕಕ್ಕೆ ಎಡೆಮಾಡಿದೆ. ಫಿಲಿಪ್ಪಿನ್ಸ್, ಮೊರೊಕ್ಕೊ ಮತ್ತು ಉಜ್ಬೇಕಿಸ್ತಾನ ದೇಶಗಳಿಂಗಿಂತಲೂ ಭಾರತದ ಪಾಸ್‌ಪೋರ್ಟ್ ಹಿಂದೆ ಬಿದ್ದಿದೆ. 188ನೇ ರ್‍ಯಾಂಕ್‌ ಮೂಲಕ ಪಾಕಿಸ್ತಾನ ಸೂಚ್ಯಂಕದಲ್ಲಿ ತಳಭಾಗದಲ್ಲಿದೆ ಎಂದು ದಿ ವೈರ್‌ ವರದಿ ಮಾಡಿದೆ.

ಜಾಗತಿಕ ಚಲನಶೀಲತೆ, ಹೂಡಿಕೆ ಸಾಮರ್ಥ್ಯ ಮತ್ತು ಜೀವನದ ಗುಣಮಟ್ಟದಂತಹ ಅಂಶಗಳನ್ನು ಪರಿಗಣಿಸಿ ಪಾಸ್‌ಪೋರ್ಟ್‌ನ ಒಟ್ಟಾರೆ ಬಲವನ್ನು ನಿರ್ಣಯಿಸುವ ಖಾಸಗಿ ಸ್ವಾಮ್ಯದ ಜಾಗತಿಕ ಚಲನಶೀಲತೆ ಸಲಹಾ ಮತ್ತು ಸಂಶೋಧನಾ ಸಂಸ್ಥೆಯಾದ ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್(ಜಿಸಿಎಸ್) ಈ ಶ್ರೇಯಾಂಕವನ್ನು ಪ್ರಕಟಿಸಿದೆ.

ಶ್ರೇಯಾಂಕ ನೀಡುವಾಗ ಪ್ರಮುಖವಾಗಿ ಪರಿಗಣಿಸುವ ಅಂಶಗಳು

1. ವರ್ಧಿತ ಚಲನಶೀಲತೆ ಸೂಚ್ಯಂಕ (ಶೇ 50): ಪಾಸ್‌ಪೋರ್ಟ್ ಮತ್ತು ಪಾಸ್‌ಪೋರ್ಟ್ ಹೊಂದಿರುವವರ ಪೌರತ್ವವು ಯಾವ ದೇಶ ಅಥವಾ ಪ್ರದೇಶದ್ದಾಗಿದೆ. ಆ ಪ್ರದೇಶದ ಜೀವನದ ಗುಣಮಟ್ಟವನ್ನು ಆಧರಿಸಿ ವೀಸಾ ಪ್ರವೇಶ ಮತ್ತು ಜಾಗತಿಕ ಅಪೇಕ್ಷಣೀಯತೆಯ ಆಧಾರದ ಮೇಲೆ ಇದನ್ನು ಪರಿಗಣಿಸಲಾಗುತ್ತದೆ.

2 ಹೂಡಿಕೆ ಸೂಚ್ಯಂಕ (ಶೇ 25): ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ ದೇಶದ ಸ್ಥಾನ, ಒಟ್ಟು ರಾಷ್ಟ್ರೀಯ ಆದಾಯ ಮತ್ತು ವೈಯಕ್ತಿಕ ಆದಾಯ ತೆರಿಗೆ ದರದಿಂದ ಪಡೆಯುವ ದೇಶದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಪರಿಗಣಿಸಲಾಗುತ್ತದೆ.

3 ಜೀವನದ ಗುಣಮಟ್ಟ (ಶೇ 25): ದೇಶ ಅಥವಾ ಆ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿ, ಜೀವನ ವೆಚ್ಚ ಮತ್ತು ಸಂತೋಷ ಸೂಚ್ಯಂಕವನ್ನು ಪರಿಗಣಿಸಲಾಗುತ್ತದೆ.

ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಅಮೆರಿಕ, ಬ್ರಿಟನ್, ಜರ್ಮನಿ, ಫ್ರಾನ್ಸ್, ಚೀನಾ ಮತ್ತು ಯುಎಇ ಸೇರಿದಂತೆ ಸುಮಾರು 88 ದೇಶಗಳನ್ನು ಪ್ರವೇಶಿಸಲು ವೀಸಾ ಅಗತ್ಯವಿದೆ.  








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries