HEALTH TIPS

ಬಿಸಿ ಗಾಳಿ: ಭಾರತದ 14 ನಗರಗಳು ಅಪಾಯದಲ್ಲಿ

 ನವದೆಹಲಿ (PTI): ತೀವ್ರ ತಾಪಮಾನದ ಅಪಾಯ ಎದುರಿಸುತ್ತಿರುವ ಜಗತ್ತಿನ ಅಗ್ರ 50 ನಗರಗಳಲ್ಲಿ ಬೆಂಗಳೂರು ಸೇರಿದಂತೆ ಭಾರತದ 14 ನಗರಗಳು ಸ್ಥಾನ ಪಡೆದಿವೆ ಎಂದು ಸಂಶೋಧನೆಯೊಂದು ವಿಶ್ಲೇಷಿಸಿದೆ. 


ಇರಾಕ್‌ನ ಅಲ್ ಬಸ್ರಾಹ್ ನಗರ ಅತಿಹೆಚ್ಚು ಅಪಾಯ ಹೊಂದಿರುವ ನಗರವಾದರೆ, ನಂತರದ ಸ್ಥಾನದಲ್ಲಿ ಭಾರತದ ಪ್ರಮುಖ ಪ್ರವಾಸಿ- ಆರ್ಥಿಕ ಕೇಂದ್ರವಾದ ಜೈಪುರ ಇದೆ.

ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕಿ ನೇಥ್ಮಿ ಜಯರತ್ನೆ ಕರಿಯಾವಸಮ್ ಅವರ ತಂಡವು 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಜಗತ್ತಿನ 205 ನಗರಗಳನ್ನು ಪಟ್ಟಿಯಲ್ಲಿ ಹೆಸರಿಸಿದ್ದು, 'ಸಸ್ಟೇನಬಲ್ ಸಿಟೀಸ್ ಆಯಂಡ್ ಸೊಸೈಟಿ' ಪತ್ರಿಕೆಯಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ.

'ಅಗ್ರ 50ರ ಪಟ್ಟಿಯಲ್ಲಿ ಭಾರತ, ಪಾಕಿಸ್ತಾನ, ನೈಜೀರಿಯಾ ಮತ್ತು ಘಾನಾ ದೇಶಗಳ ನಗರಗಳು ಸ್ಥಾನ ಪಡೆದಿವೆ. ಅತಿಹೆಚ್ಚು ಅಪಾಯದಲ್ಲಿರುವ ಶೇ 95ರಷ್ಟು ನಗರಗಳು ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಹಾಗೂ ಉಪ- ಸಹಾರಾ ಆಫ್ರಿಕಾ ಖಂಡಗಳಲ್ಲೇ ಇವೆ' ಎಂದು ಅವರು ಹೇಳಿದ್ದಾರೆ.

'ಹಲವು ಪ್ರಮುಖ ನಗರಗಳಲ್ಲಿ ಹೆಚ್ಚಿನ ತಾಪಮಾನದ ಜೊತೆಗೆ ಹೆಚ್ಚಿನ ದುರ್ಬಲ ಮತ್ತು ಸೀಮಿತ ನಿರ್ವಹಣಾ ಸಾಮರ್ಥ್ಯವೂ ಸೇರಿಕೊಂಡಿದೆ. ಪರಿಣಾಮವಾಗಿ ಉಷ್ಣ ಸಂಬಂಧಿ ಅಪಾಯವು ಗಮನಾರ್ಹವಾಗಿ ಹೆಚ್ಚುತ್ತದೆ ಮತ್ತು ಕೆಲವು ಪ್ರಕರಣಗಳಲ್ಲಿ ಜೀವಕ್ಕೆ ಅಪಾಯವೂ ಹೌದು' ಎಂದು ವಿವರಿಸಲಾಗಿದೆ.

ಈಜಿಪ್ಟ್‌ನ ಕೈರೊ, ವಿಯೆಟ್ನಾಂನ ಹನೋಯಿ ಮತ್ತಿತರ ಪ್ರಮುಖ ಪ್ರವಾಸಿ ಮತ್ತು ಆರ್ಥಿಕ ಕೇಂದ್ರಗಳೂ ಅಗ್ರ 50ರ ಒಳಗೆ ಸ್ಥಾನ ಪಡೆದಿವೆ.

'ಸಮರ್ಥ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರುವ ಥಾಯ್ಲೆಂಡ್‌ನ ಬ್ಯಾಂಕಾಕ್, ಸೌದಿ ಅರೇಬಿಯಾದ ಜೆದ್ದಾ ನಗರಗಳು ಕಡಿಮೆ ರ‍್ಯಾಂಕ್ ಪಡೆದಿವೆ. ಸಾಮಾನ್ಯ ತಾಪಮಾನ ಇರುವ ಪಾಕಿಸ್ತಾನದ ಕರಾಚಿ, ಫೈಸಲಾಬಾದ್ ಮತ್ತು ನೈಜೀರಿಯಾದ ಕಡುನಾ ನಗರಗಳು ನಿರ್ವಹಣಾ ಸಾಮರ್ಥ್ಯದ ಕೊರತೆಯಿಂದಾಗಿ ಹೆಚ್ಚು ಅಪಾಯಕ್ಕೆ ಒಳಗಾಗಲಿವೆ' ಎಂದು ಬಹಿರಂಗಪಡಿಸಿದೆ.

ಅಪಾಯದ ಪಟ್ಟಿಯಲ್ಲಿ...

ಅಹಮದಾಬಾದ್, ನಾಗ್ಪುರ, ಮದುರೈ, ಭೋಪಾಲ್, ಕಾನ್ಪುರ, ಪುಣೆ, ಪಟ್ನಾ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತ, ಜೈಪುರ, ಲಖನೌ, ಮುಂಬೈ.

ಜೀವನ ವೆಚ್ಚ ಹೆಚ್ಚಿಸುವ ಬಿಸಿ ಹವೆ'

ನವದೆಹಲಿ (PTI): ಹವಾಮಾನ ಪ್ರೇರಿತ ಬಿಸಿಗಾಳಿಯು ಕೃಷಿ ಮತ್ತು ನಿರ್ಮಾಣ ವಲಯದಲ್ಲಿ ಕೆಲಸ ಮಾಡುವವರ ಜೀವನ ವೆಚ್ಚದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿಯೊಂದು ಹೇಳಿದೆ.

'ಭಾರತ, ಬಾಂಗ್ಲಾದೇಶ, ಇಂಡೊನೇಷ್ಯಾ, ನೈಜೀರಿಯಾ ದೇಶಗಳಲ್ಲಿ ಉಷ್ಣತೆ ಕಾರಣದಿಂದಾಗಿ ಪ್ರತಿವರ್ಷ ಕನಿಷ್ಠ 20 ಕೆಲಸದ ದಿನಗಳು ನಷ್ಟವಾಗುತ್ತಿದ್ದು, ಜೀವನ ನಿರ್ವಹಣೆಗೆ ಕಷ್ಟಪಡುತ್ತಿರುವ ಕುಟುಂಬಗಳಲ್ಲಿ ಇದು ಆದಾಯ ಕೊರತೆಗೆ ಕಾರಣವಾಗುತ್ತಿದೆ' ಎಂದು ವರದಿ ಬಹಿರಂಗಪಡಿಸಿದೆ.

ಎಂಟು ವಿಭಿನ್ನ ಆರ್ಥಿಕತೆಗಳಾದ ಬಾಂಗ್ಲಾದೇಶ, ಬ್ರೆಜಿಲ್, ಫ್ರಾನ್ಸ್, ಭಾರತ, ಇಂಡೊನೇಷ್ಯಾ, ಇಟಲಿ, ನೈಜೀರಿಯಾ, ದಕ್ಷಿಣ ಆಫ್ರಿಕಾಗಳನ್ನು ಅಧ್ಯಯನವು ಒಳಗೊಂಡಿದೆ.

ದುಡಿಮೆಯ ದಿನಗಳನ್ನು ಕಡಿಮೆ ಪ್ರಮಾಣದಲ್ಲಿ ಕಳೆದುಕೊಳ್ಳುವ ದೇಶಗಳಾದ ಬ್ರೆಜಿಲ್, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಇಟಲಿಗಳಲ್ಲಿಯೂ ಉಷ್ಣತೆಯ ಕಾರಣಕ್ಕೆ ಆಗುವ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಮತ್ತು ಅದರ ಪರಿಣಾಮವಾಗಿ ಪ್ರತಿ ವರ್ಷ ₹2.38 ಲಕ್ಷ ಕೋಟಿಗೂ ಅಧಿಕ (25 ಬಿಲಿಯನ್ ಅಮೆರಿಕ ಡಾಲರ್) ಒಟ್ಟು ಆಂತರಿಕ ಉತ್ಪನ್ನ ಕುಸಿತ ಕಾಣುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries