HEALTH TIPS

ದೆಹಲಿಯಾದ್ಯಂತ ಸರ್ಕಾರಿ ಕಟ್ಟಡಗಳಲ್ಲಿ ತಲೆ ಎತ್ತಲಿವೆ 'ಸೋಲಾರ್ ಟ್ರೀ'

 ನವದೆಹಲಿ: ದೆಹಲಿ ಸರ್ಕಾರವು ಎಲ್ಲ ಕಾರ್ಯಾಲಯಗಳ ಕಟ್ಟಡಗಳಲ್ಲಿ 'ಸೋಲಾರ್ ಟ್ರೀ' ಸ್ಥಾಪಿಸಲು ಯೋಜಿಸುತ್ತಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 


ಮುಖ್ಯಮಂತ್ರಿ ರೇಖಾ ಗುಪ್ತಾ, ಸಚಿವರು ಮತ್ತು ಉನ್ನತ ಅಧಿಕಾರಿಗಳು ತಮ್ಮ ಕಚೇರಿಗಳನ್ನು ಹೊಂದಿರುವ ದೆಹಲಿ ಸಚಿವಾಲಯದ ಕಟ್ಟಡದಲ್ಲಿ ಯಶಸ್ವಿಯಾಗಿ ಸೋಲಾರ್ ಟ್ರೀ ಸ್ಥಾಪಿಸಿದ ನಂತರ, ಈ ಉಪಕ್ರಮವನ್ನು ನಗರದಾದ್ಯಂತ ವಿಸ್ತರಿಸಲು ಯೋಜಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಲಾರ್ ಟ್ರೀ ಮೂಲಕ ಸೌರ ವಿದ್ಯುತ್ ಉತ್ಪಾದನೆ ಗರಿಷ್ಠಗೊಳಿಸಲು ಸರ್ಕಾರ ನಿರ್ಧರಿಸಿದೆ. ಮರದಂತಹ ರಚನೆಯಲ್ಲಿ ಜೋಡಿಸಲಾದ ದ್ಯುತಿವಿದ್ಯುಜ್ಜನಕ (ಪಿವಿ) ಫಲಕಗಳನ್ನು ಕಚೇರಿಗಳ ಮೇಲೆ ಅಳವಡಿಸಲಾಗುತ್ತದೆ.

ಪಿವಿ ಫಲಕಗಳ ಜೊತೆಗೆ, ಲೋಹದ ಚೌಕಟ್ಟುಗಳು, ಪ್ಲಾಸ್ಟಿಕ್‌ ಮತ್ತು ಇತರ ವಸ್ತುಗಳು ಸೇರಿ ಸಂಪೂರ್ಣ ಸೌರ ಸೆಟಪ್ ಅನ್ನು ಮರದಂತಹ ರಚನೆ ರೂಪಿಸಲು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕವಾಗಿ ಹಲವು ನಗರಗಳಲ್ಲಿ ಸೋಲಾರ್ ಟ್ರೀಗಳನ್ನು ಕಾಣಬಹುದಾಗಿದೆ. ದೇಶದ ರಾಜಧಾನಿ ನವದೆಹಲಿಯಲ್ಲಿಯೂ ಸಹ ಅವು ಶೀಘ್ರ ತಲೆ ಎತ್ತಲಿವೆ. ಈ ಕುರಿತಂತೆ ದೆಹಲಿಯ ಇಂಧನ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಸೋಲಾರ್ ಟ್ರೀಗಳ ಪಿವಿ ಫಲಕಗಳು ಸೂರ್ಯನ ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುತ್ತವೆ. ಅದರ ಬುಡದಲ್ಲಿರುವ ಬ್ಯಾಟರಿಯಲ್ಲಿ ವಿದ್ಯುತ್ ಸಂಗ್ರಹವಾಗುತ್ತದೆ. ಅಲ್ಲದೆ, ಕಾಲಕಾಲಕ್ಕೆ ಸೂರ್ಯನ ಬೆಳಕನ್ನು ಗರಿಷ್ಠ ಪ್ರಮಾಣದಲ್ಲಿ ಸೆರೆಹಿಡಿಯಲು ಅನುಕೂಲವಾಗುವಂತೆ ಈ ಫಲಕಗಳನ್ನು ತಿರುಗಬಲ್ಲ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries