ಪೆರ್ಲ: ಭಾರತೀಯ ಜನತಾ ಪಾರ್ಟಿಯ ಸಂಘಟನಾ ಸಬಲೀಕರಣ ಎಂಬ ಆಶಯದ ಪ್ರಚಾರಾರ್ಥ ಕುಂಬಳೆ ಮಂಡಲ ಸಮಿತಿಯ ಪ್ರಶಿಕ್ಷಣ ಅಭಿಯಾನ್ ದ್ವಿದಿನ ಕಾರ್ಯಕರ್ತರ ಕಮ್ಮಟ ಜುಲೈ 18 ಮತ್ತು 19ರಂದು ಪೆರ್ಲದ ಶ್ರೀಶಂಕರಸದನದಲ್ಲಿ ಜರುಗಲಿದೆ.
ಪಕ್ಷದ ಉದ್ದೇಶ, ಸಂಘಟನಾ ರೀತಿ, ಕೇಂದ್ರ ಸರ್ಕರದ ಕಲ್ಯಾಣ ಯೋಜನೆಗಳು, ಸಾಮಾಜಿಕ ಮಾಧ್ಯಮಗಳ ಪರಿಣಾಮಕಾರಿ ಉಪಯೋಗ, ಬೂತ್ ಮಟ್ಟದಲ್ಲಿ ಪಕ್ಷದ ಚಟುವಟಿಕೆ ನಡೆಸುವುದು ಇತ್ಯಾದಿ ವಿಷಯಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ತರಗತಿ ನಡೆಸಲಿದ್ದಾರೆ.
ಈ ಕಮ್ಮಟದಲ್ಲಿ ಪಂಚಾಯಿತಿ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿಕೇಂದ್ರ ಜವಾಬ್ದಾರಿ ಹೊಂದಿರುವವರು, ಮಂಡಲ ಸಮಿತಿ ಸದಸ್ಯರು, ಮಂಡಲ ಪದಾಧಿಕಾರಿಗಳು, ಪ್ರಧಾನ ಕಾರ್ಯದರ್ಶಿಗಳು, ಶಕ್ತಿಕೇಂದ್ರ ಪ್ರಭಾರಿಗಳು, ವಿವಿಧ ಮೋರ್ಚಾಗಳ ಮಂಡಲ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪದಾಧಿಕಾರಿಗಳು ಕಮ್ಮಟದಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

