HEALTH TIPS

ಐಫೋನ್ ಬದಲು ಎಣ್ಣೆ ಕಳುಹಿಸಿದ ಫ್ಲಿಪ್‌ಕಾರ್ಟ್‌: ₹1.8 ಲಕ್ಷ ಮರುಪಾವತಿಗೆ ಆದೇಶ

ಮುಂಬೈ: ಆಯಪಲ್‌ ಐಫೋನ್ ಬದಲು 'ಬಿಯರ್ಡ್ ಗ್ರೋತ್ ಆಯಿಲ್' ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಹಕನಿಗೆ ಬಡ್ಡಿ ಸಮೇತ ಸಂಪೂರ್ಣ ಹಣ ಮರುಪಾವತಿಸುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಫ್ಲಿಪ್‌ಕಾರ್ಟ್ ಹಾಗೂ ಮಾರಾಟಗಾರರಿಗೆ ನಿರ್ದೇಶನ ನೀಡಿದೆ. 


ಅಲ್ಲದೇ, ಮಾನಸಿಕ ನೆಮ್ಮದಿ ಹಾಳು ಮಾಡಿರುವುದಕ್ಕೆ ₹50 ಸಾವಿರ, ಮೊಕದ್ದಮೆ ವೆಚ್ಚವಾಗಿ ₹20 ಸಾವಿರ ಪರಿಹಾರ ಹಣವನ್ನು 45 ದಿನಗಳ ಒಳಗೆ ಪಾವತಿಸುವಂತೆ ಆದೇಶಿಸಿದೆ.

ಮುಂಬೈನ ಪೊವಾಯಿ ಪ್ರದೇಶದ ನಿವಾಸಿಯಾದ ದೂರುದಾರರು, ಮೂರು ವರ್ಷದ ಹಿಂದೆ ಫ್ಲಿಪ್‌ಕಾರ್ಟ್ ಮೂಲಕ ನೋ-ಕಾಸ್ಟ್ ಇಎಂಐ ಬಳಸಿ ₹1,11,793 ಬೆಲೆಯ ಐಫೋನ್ 14 ಪ್ರೊ (128 ಜಿಬಿ) ಖರೀದಿಸಿದ್ದರು.

ಪ್ರತ್ಯೇಕವಾಗಿ ಆರ್ಡರ್ ಮಾಡಲಾಗಿದ್ದ ಚಾರ್ಜರ್ ಮತ್ತು ಕವರ್ ಮನೆಗೆ ತಲುಪಿದ್ದರೂ, ಮರುದಿನ ಡೆಲಿವರಿ ಆಗಿದ್ದ ಪಾರ್ಸೆಲ್‌ನಲ್ಲಿ ದುಬಾರಿ ಐಪೋನ್‌ ಬದಲು ಬಿಯರ್ಡ್ ಗ್ರೋತ್ ಆಯಿಲ್ ಇದ್ದಿತ್ತು.

ತಕ್ಷಣ ಫ್ಲಿಪ್‌ಕಾರ್ಟ್‌ನ ಕಸ್ಟಮರ್ ಕೇರ್‌ ಸಂಪರ್ಕಿಸಿ, ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ ಹೊರತಾಗಿಯೂ ಕಂಪನಿಯು ಸಮಸ್ಯೆಯನ್ನು ಬಗೆಹರಿಸಲು ವಿಫಲವಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

'ದೂರಿನ ಬಗ್ಗೆ ತನಿಖೆ ನಡೆಸಲು, ತಪ್ಪಾಗಿ ವಿತರಿಸಲಾದ ಪಾರ್ಸೆಲ್ ಅನ್ನು ಮರಳಿ ಪಡೆಯಲು, ಬದಲಿ ಉತ್ಪನ್ನ ಅಥವಾ ಮರುಪಾವತಿಯನ್ನು ಒದಗಿಸಲು ವಿಫಲವಾಗಿರುವುದು ಮತ್ತು ಯಾವುದೇ ಪರಿಣಾಮಕಾರಿ ಪರಿಹಾರವನ್ನು ನೀಡದೆ ಪದೇ ಪದೇ ದೂರನ್ನು ಮುಚ್ಚಿರುವುದು ಸೇವೆಯಲ್ಲಿನ ಸ್ಪಷ್ಟ ನ್ಯೂನತೆಯಾಗಿದೆ ಮತ್ತು ಅನುಚಿತ ವ್ಯಾಪಾರ ಪದ್ಧತಿಯಾಗಿದೆ' ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಅಸಲು ಮೊತ್ತವಾದ ₹1,11,793 ಹಣವನ್ನು ಏಪ್ರಿಲ್ 22, 2023ರಿಂದ ಹಣ ಪಾವತಿಯಾಗುವವರೆಗೂ ವಾರ್ಷಿಕ ಶೇ 9 ರಷ್ಟು ಬಡ್ಡಿಯೊಂದಿಗೆ ಮರುಪಾವತಿಸುವಂತೆ ನ್ಯಾಯಾಲಯವು ಫ್ಲಿಪ್‌ಕಾರ್ಟ್ ಮತ್ತು ಮಾರಾಟಗಾರ ಇಂಟರ್‌ನ್ಯಾಷನಲ್ ವ್ಯಾಲ್ಯೂ ರಿಟೇಲ್ ಪ್ರೈವೇಟ್ ಲಿಮಿಟೆಡ್‌ಗೆ ನಿರ್ದೇಶಿಸಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries