ಹೈದರಾಬಾದ್: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿಯನ್ನು 21 ವರ್ಷಕ್ಕೆ ಇಳಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಲು ತೆಲಂಗಾಣ ಸರಕಾರ ಶೀಘ್ರದಲ್ಲೇ ವಿಶೇಷ ವಿಧಾನಸಭೆ ಅಧಿವೇಶನವನ್ನು ಕರೆಯಲಿದೆ ಎಂದು ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಹೇಳಿದ್ದಾರೆ.
ಚುನಾವಣೆಗೆ ಸ್ಪರ್ಧಿಸಲು ಈಗಿರುವ ವಯಸ್ಸು 25 ವರ್ಷ. ನೀಟ್ ಪೇಪರ್ ಸೋರಿಕೆ ವಿಚಾರವಾಗಿ ಆಯೋಜಿಸಲಾಗಿದ್ದ ಕ್ಯಾಂಡಲ್ ಲೈಟ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಉeಟಿ Z ಆಂದೋಲನವು 56 ಇಂಚಿನ ಎದೆಯನ್ನು ಸೋಲಿಸಿತು ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತು ಎಂದು ಹೇಳಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ವಿಶೇಷ ಅಧಿವೇಶನ ನಡೆಸುತ್ತೇವೆ. ವಿಧಾನಸಭೆಯಲ್ಲಿ ಶಾಸಕ ಮತ್ತು ಸಂಸದ ಸ್ಥಾನಕ್ಕೆ ಸ್ಪರ್ಧೆಗೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸಲು ನಿರ್ಣಯವನ್ನು ಅಂಗೀಕರಿಸಿ ಬಳಿಕ ಅದನ್ನು ಪ್ರಧಾನಿಗೆ ಕಳುಹಿಸುತ್ತೇವೆ. ಈ ಕುರಿತು ಸಂವಿಧಾನಕ್ಕೆ ತಿದ್ದುಪಡಿ ತರಬೇಕು ಎಂದು ಹೇಳಿದ್ದಾರೆ.
ದೇಶದ ಜನಸಂಖ್ಯೆಯ ಶೇಕಡಾ 30ರಷ್ಟಿದ್ದರೂ ಲೋಕಸಭೆಯಲ್ಲಿ ಉeಟಿ Z ಪ್ರಾತಿನಿಧ್ಯವು ಶೇಕಡಾ ಒಂದಕ್ಕಿಂತ ಕಡಿಮೆಯಿದೆ. 21 ವರ್ಷಕ್ಕಿಂತ ಮೇಲ್ಪಟ್ಟ ಯುವಕರು ಮಂತ್ರಿಯಾದರೆ ದೇಶದ ಭವಿಷ್ಯ ಬದಲಾಗುತ್ತದೆ ಎಂದು ಹೇಳಿದರು. ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, 18 ವರ್ಷದ ಯುವಕ ಜರ್ಮನಿ ಮತ್ತು ಬ್ರಿಟನ್‌ನಲ್ಲಿ ಪ್ರಧಾನಿ ಮತ್ತು ಅಧ್ಯಕ್ಷರಾಗಬಹುದು. ಸಿಂಗಾಪುರದಲ್ಲಿ 21 ವರ್ಷದ ಯುವಕ ಪ್ರಧಾನಿಯಾಗಬಹುದು ಎಂದು ಹೇಳಿದರು.

