ಬದಿಯಡ್ಕ: ನೀಚಾರ್ಲಿನಲ್ಲಿರುವ ಬೇಳ ಗ್ರಾಮಾಧಿಕಾರಿ ಕಚೇರಿ ಬಾಗಿಲ ಬೀಗ ಒಡೆದು ನುಗ್ಗಿದ ಕಳ್ಳರು ಕಚೇರಿಯಲ್ಲಿದ್ದ ಮೂರು ಲ್ಯಾಪ್‍ಟಾಪ್‍ಗಳನ್ನು ಕಳವುಗೈದಿದ್ದಾರೆ. ಕಚೇರಿಯಿಂದ ಇತರ ದಾಖಲೆಪತ್ರಗಳನ್ನು ಕಳವುಗೈದಿರುವ ಬಗ್ಗೆ ಮಾಹಿತಿ ಲಭ್ಯವಾಗಬೇಕಾಗಿದೆ. ಕಳವು ಬಗ್ಗೆ ಲಭಿಸಿದ ದೂರಿನಂತೆ ಬದಿಯಡ್ಕ ಪೋಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ.
ಗ್ರಾಮಾಧಿಕಾರಿ ಶಶಿ ಅವರು ಮಂಗಳವಾರ ಬೆಳಗ್ಗೆ ಕಚೇರಿಗೆ ತಲುಪಿದಾಗ ಕಚೇರಿಯ ಬಾಗಿಲಿನ ಬೀಗ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಪಾಸಣೆ ನಡೆಸಿದಾಗ ಲ್ಯಾಪ್ ಟಾಪ್ ಕಳವು ಬೆಳಕಿಗೆ ಬಂದಿದೆ.



