HEALTH TIPS

ವಾಹನ ತಪಾಸಣೆ ನಡೆಸುತ್ತಿದ್ದ ಪೋಲೀಸರನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನ-ಮೂವರ ಬಂಧನ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿ ವಾಹನ ತಪಾಸಣೆ ನಡೆಸುತ್ತಿzರುವ ಮಧ್ಯೆ ತಂಡವೊಂದು ಪೆÇಲೀಸರನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬದಿಯಡ್ಕ, ನೆಕ್ರಾಜೆ ನಿವಾಸಿಗಳಾದ ಸಫ್ವಾನ್, ಅಮೀರ್, ಕಾಞಂಗಾಡ್ ಕಲ್ಲೂರಾವಿಯ ಮುಹಮ್ಮದ್ ಶಮೀನ್ ಬಂಧಿತರು.  ಇವರ ವಿರುದ್ಧ ಹತ್ಯಾ ಯತ್ನಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಳ್ಳಲಾಗಿದೆ. ತಂಡ ನಡೆಸಿದ ದಾಳಿಯಿಂದ ಎ.ಆರ್ ಕ್ಯಾಂಪ್‍ನ ಪೆÇಲೀಸ್ ಸಂದೀಪ್ ಅವರಿಗೆ ಗಾಯವುಂಟಾಗಿದೆ. ದಾಂಧಲೆಯಲ್ಲಿ ನಿರತರಾಗಿದ್ದ ತಂಡವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.


ಮಂಗಳವಾರ ಮುಂಜಾನೆ 1.30ರ ವೇಳೆ ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಘಟನೆ ನಡೆದಿದೆ. ಕಾಸರಗೋಡು  ಕಂಟ್ರೋಲ್ ರೂಂ ಎಸ್.ಐ ನೇತೃತ್ವದ ಪೊಲೀಸರ  ತಂಡ ವಾಹನ ತಪಾಸಣೆ ನಡೆಸುತ್ತಿರುವ ಮಧ್ಯೆ ಕರಂದಕ್ಕಾಡ್ ಭಾಗದಿಂದ ಬೈಕ್‍ನಲ್ಲಿ ಮೂರು ಮಂದಿ ಆಗಮಿಸಿದ್ದರು. ಹೆಲ್ಮೆಟ್ ಧರಿಸದೆ ಬೈಕ್ ಸವಾರರು ಸಂಚರಿಸುತ್ತಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ. ಬೈಕ್ ತಡೆದು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಂತೆ ಸವಾರರು ಪೆÇಲೀಸರಲ್ಲಿ ವಾಗ್ವಾದಕ್ಕೆ ಮುಂದಾಗಿದ್ದಾರೆ. ಈ ಮಧ್ಯೆ ಹಲ್ಲೆಗೆಯಲು ಯತ್ನ ಉಂಟಾದಾಗ ಸಂದೀಪ್ ತಡೆಯಲು ಯತ್ನಿಸಿದ್ದಾರೆ.  ಈ ಸಂದರ್ಭ ಸವಾರರಲ್ಲಿ ಒಬ್ಬಾತ ಕತ್ತಿ ತೆಗೆದು ಕತ್ತಿನ ಭಾಗಕ್ಕೆ ಕಡಿಯಲು ಯತ್ನಿಸಿದ್ದಾನೆ ಈ ಸಂದರ್ಭ ತಡೆಯಲೆತ್ನಿಸಿದಾಗ ಸಂದೀಪ್ ಅವರ ಕೈಗೆ ಗಾಯವುಂಟಾಗಿದೆ. ಈ ಬಗ್ಗೆ ಕಾಸರಗೋಡು ನಗರ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries