ಬುನಿಯಾ: ಕಾಂಗೊದಲ್ಲಿ ಎಬೋಲಾ ಸೋಂಕು ಪ್ರಕರಣಗಳ ಸಂಖ್ಯೆ 3 ಸಾವಿರ ಸಮೀಪಕ್ಕೆ ಬಂದಿದೆ. ಈ ಮಧ್ಯೆ, ಉತ್ತರ ಕಾಂಗೊದ ಎಬೋಲಾ ಚಿಕಿತ್ಸಾ ಕೇಂದ್ರದ ಸಿಬ್ಬಂದಿ ವೇತನ ವಿಚಾರಕ್ಕೆ ಶನಿವಾರ ಮುಷ್ಕರ ಆರಂಭಿಸಿದ್ದಾರೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಇಲ್ಲಿನ ಅಧಿಕಾರಿಗಳು ಶುಕ್ರವಾರ ಪ್ರಕರಣಗಳ ಅಂಕಿ-ಅಂಶ ಬಿಡುಗಡೆ ಮಾಡಿದ್ದು, ಸೋಂಕಿತರ ಸಂಖ್ಯೆ 2,973ಕ್ಕೆ ತಲುಪಿದೆ.
ಇದರಲ್ಲಿ 1,309 ಮಂದಿ ಮೃತರು ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಸೋಂಕು ಕಾಣಿಸಿಕೊಂಡಾಗಿನಿಂದ 100 ಆರೋಗ್ಯ ಕಾರ್ಯಕರ್ತರಿಗೆ ಎಬೋಲಾ ತಗುಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

